ಬಿಗ್‍ಬಾಸ್ ಆರಂಭವಾದ ಮೊದಲ ವಾರದಲ್ಲಿಯೇ ಆಡಿಯೆನ್ಸ್‍ಗೆ ಮಜಾ ನೀಡುತ್ತಾ ಬರುತ್ತಿದೆ. ಟಾಸ್ಕ್ ನಡುವೆ ತುಂಟಾಟದ ಜೊತೆ ಹುಸಿಕೋಪದೊಂದಿಗೆ ಬಿಗ್ ಮನೆಯ ಮೆಂಬರ್ಸ್ ಸಖತ್ ಎಂಜಾಯ್ ಮಾಡ್ತಿದ್ದಾರೆ. ಬೆಳ್ಳಂಬೆಳಗ್ಗೆ ವಾಶ್ ರೂಂ ಬಳಿ ಸೇರ್ಕೊಂಡ ಸೆಲೆಬ್ರಿಟಿಗಳು ಹರಠೆ ಹೊಡೀತಾ ಇದ್ರು. ಅಲ್ಲಿ ಶುಭಾ ಪೂಂಜಾ, ವೈಷ್ಣವಿ, ದಿವ್ಯ, ಸಂಬರಗಿ, ಲ್ಯಾಗ್ ಮಂಜು ಒಳಗೊಂಡಂತೆ ಮಾತಾಡ್ತಾ ಇದ್ರು.ಅಲ್ಲಿಗೆ ಬಂದ ಶುಭಾ ಮುಂದೆ ಕುಳಿತಿದ್ದ ದಿವ್ಯಾಗೆ ಸಿಟ್ಟು ಮಾಡ್ತಿದ್ರು. ಶುಭಾ ಬೈದಿದಕ್ಕೆ ನಕ್ಕ ದಿವ್ಯಾ, ನೀವು ಸಿಟ್ಟು ಮಾಡ್ಕೊಂಡ್ರು ತುಂಬಾನೇ ಕ್ಯೂಟ್ ಆಗಿ ಕಾಣಸ್ತೀರಿ ಅಂದ್ರು. ದಿವ್ಯಾ ಮಾತಿಗೆ ವೈಷ್ಣವಿ ಸಹ ಹೌದು ಅಂತ ಸನ್ನೆ ಮಾಡಿದ್ರು. ಹೌದು ನಾನು ಮನೆಯಲ್ಲಿ ಒಂದು ತರ ಜೋಕರ್. ಬೈಯುತ್ತಿದ್ರೆ ಎಲ್ಲರೂ ಸ್ಮೈಲ್ ಮಾಡ್ತಾರೆ. ಇನ್ನು ಪಿಯಾನ್ಸೆ ಆಫೀಸ್ ನಿಂದ ಬಂದ ಕೂಡಲೇ ಮಾತಾಡು ಅಂತ ಫೋನ್ ಮಾಡ್ತಾರೆ. ಒಂದು ತರ ನಾನು ಅವನಿಗೆ 24 ಗಂಟೆನೂ ಎಂಟೈಟೇನ್ಮೆಂಟ್. ಅವನು ಎಷ್ಟು ಲಕ್ಕಿ ಅಲ್ವಾ? ಅವನಿಗೆ ನಗಿಸೋಕೆ ಅಂತ ನಾನಿದ್ದೀನಿ ಅಂತ ಗೆಳೆಯನ್ನ ನೆನಪು ಮಾಡ್ಕೊಂಡ್ರು ಶುಭಾ.ಇನ್ನು ಅಲ್ಲೇ ನಿಂತಿದ್ದ ಪ್ರಶಾಂತ್ ಸಂಬರಗಿ ಎಲೆಜಿಬೆತ್ ರಾಣಿಗೆ ನಗಿಸೋಕೆ ಅಂತ ಪರ್ಸನಲ್ ಆರ್ಟಿಸ್ಟ್ ಇರ್ತಾರೆ. ಅವರಿಗೆ ಎಲ್ಲ ಕೆಲಸಗಳಿಗೂ ಪರ್ಸನಲ್ ಲೇಬರ್ಸ್ ಇರ್ತಾರೆ ಅಂದ್ರು. ಈ ವೇಳೆ ಮಧ್ಯೆ ಪ್ರವೇಶಿಸಿದ ಲ್ಯಾಗ್ ಮಂಜು ಆದ್ರೂ ಮಾವ ಯೋಗ ಮಾಡೋವಾಗ ಟೀ ಕುಡಿತಾರೆ ಅನ್ನೋದನ್ನ ನಿಮ್ಮನ್ನ ನೋಡಿದಾಗ ಅರ್ಥ ಆಯ್ತು ಅಂತ ಸಂಬರಗಿಯ ಕಾಲೆಳೆದ್ರು.Sign in to your account
Username or Email Address


Password

 Remember Me


