ಗದಗ: ಚಾಲೆಂಜಿಂಗ್ ಸ್ಟಾರ್ ದರ್ಶನ್‍ನ ಪ್ರಾಣಿ ಪ್ರೀತಿ ಎಲ್ಲರಿಗೂ ಗೊತ್ತು. ಫಾರ್ಮ್ ಹೌಸ್‍ನಲ್ಲೇ ವಿವಿಧ ಪ್ರಾಣಿಗಳಿವೆ. ಇದರ ಜೊತೆ ಝೂಗಳಲ್ಲೂ ಪ್ರಾಣಿಗಳನ್ನ ದತ್ತು ತೆಗೆದುಕೊಂಡಿದ್ದಾರೆ. ಹೀಗಿರೋವಾಗ ತನ್ನ ಕಟ್ಟಾ ಅಭಿಮಾನಿಯೊಬ್ಬ ಈಗ ದರ್ಶನ್‍ಗೆ ಪ್ರೀತಿಯಿಂದ ಸಾಕಿದ ಟಗರನ್ನು ಗಿಫ್ಟ್ ಆಗಿ ನೀಡಲು ಮುಂದಾಗಿದ್ದಾನೆ.ಹೌದು. ಗದಗ ತಾಲೂಕಿನ ಕಣವಿ ಗ್ರಾಮದ ಶಂಭು ಗಡಗಿ ಇದೀಗ ತಾನು ಮಗುವಿನಂತೆ ಪ್ರೀತಿಯಿಂದ ಸಾಕಿ ಬೆಳೆಸಿದ ಟಗರುವನ್ನು ಬೀಳ್ಕೊಡೋಕೆ ರೆಡಿ ಮಾಡ್ತಿದ್ದಾನೆ. ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಟಗರು ಸಾಕೋ ಈತನಿಗೆ ದರ್ಶನ್ ಅಂದ್ರೆ ಪಂಚಪ್ರಾಣ. ತನ್ನ ಹೀರೋಗೆ ಏನಾದ್ರೂ ಮರೆಯಲಾಗದ್ದು ಗಿಫ್ಟ್ ಮಾಡ್ಬೇಕು ಅನ್ನೋ ಹಂಬಲ.ಕೆಲ ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ರಾಬರ್ಟ್ ಫಿಲಂ ಪ್ರೀ ಲಾಂಚ್ ವೇಲೆ ದಚ್ಚುವನ್ನು ನೋಡೋಕೆ ಅಂತಾನೇ ಶಂಭು ಹುಬ್ಬಳ್ಳಿಗೆ ತನ್ನ ಬೀರ ಅನ್ನೋ ಹೆಸರಿನ ಈ ಟಗರುವನ್ನು ಕೂಡಾ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಅಭಿಮಾನಿ ಶಂಭುರವರ ಕೂಗಿಗೆ ಕಾರಿನಿಂದ ಇಳಿದು ಬಂದ ದರ್ಶನ್ ಫುಲ್ ಖುಷ್ ಆಗಿದ್ದಾರೆ. `ಟಗರನ್ನು ಚೆನ್ನಾಗೇ ಬೆಳಿಸಿದ್ದೀಯಾ’ ಅಂತಾನೂ ಬೆನ್ನು ತಟ್ಟಿ, ನಾನಾಗಿಯೇ ಗಾಡಿ ಕಳಿಸ್ತೀನಿ. ಮೈಸೂರಿನ ನನ್ನ ಫಾರಂಗೆ ಟಗರು ತಗೊಂಡು ಬಾ ಅಂತಾ ಮೊಬೈಲ್ ನಂಬರ್ ಕೊಟ್ಟು ಹೋಗಿದ್ದಾರೆ.80 ಕೆಜಿ ತೂಗೋ ಈ ಪೊಗರ್‍ದಸ್ತಾದ ಟಗರಿಗೆ 50 ಸಾವಿರಕ್ಕೂ ಅಧಿಕ ಮೊತ್ತದ ಬೇಡಿಕೆ ಬಂದಿತ್ತಂತೆ. ಇಷ್ಟು ಡಿಮ್ಯಾಂಡ್ ಬಂದಿದ್ರೂ ಶಂಭು ಮಾತ್ರ ದಚ್ಚುಗೆ ಇದನ್ನು ಗಿಫ್ಟ್ ಆಗಿ ನೀಡಿ ತನ್ನ ಆಸೆ ಪೂರೈಸಿಕೊಂಡಿದ್ದಾನೆ. ಒಟ್ಟಿನಲ್ಲಿ ತುಂಬಾ ಮುದ್ದಿನಿಂದ ಸಾಕಿದ ಟಗರುವನ್ನೇ ಗಿಫ್ಟ್ ಮಾಡಿ ದಚ್ಚು ಅಭಿಮಾನಿ ಅಭಿಮಾನವನ್ನು ಮೆರೆದಿದ್ದಾನೆ. ಕೆಲವೇ ದಿನಗಳಲ್ಲಿ ಈ ಟಗರು ದರ್ಶನ್ ಫಾರ್ಮ್ ಹೌಸ್ ಸೇರಿಕೊಳ್ಳಲಿದೆ.Sign in to your account
Username or Email Address


Password

 Remember Me


