ಬಳ್ಳಾರಿ: ವಿದ್ಯುತ್ ತಂತಿ ತಗುಲಿ ಅಪಾರ ಪ್ರಮಾಣ ಕೆಂಪು ಮೆಣಸಿನಕಾಯಿ ಸುಟ್ಟು ಕರಕಲಾದ ಘಟನೆ ಬಳ್ಳಾರಿ ಹಾಗೂ ಆಂಧ್ರ ಗಡಿ ಭಾಗದಲ್ಲಿ ನಡೆದಿದೆ. ಇಂದು ಮಧ್ಯಾಹ್ನದ ಸಮಯದಲ್ಲಿ ಆಂದ್ರಪ್ರದೇಶದ ಅನಂತಪುರದಿಂದ ರಾಜ್ಯದ ಹಾವೇರಿ ಜಿಲ್ಲೆಯ ಬ್ಯಾಡಗಿಗೆ ಲಾರಿಯಲ್ಲಿ ಕಪು ಮಣಸಿನಾಕಾಯಿ ಸಾಗಿಸಲಾಗುತಿತ್ತು. ರಸ್ತೆ ದಾಟುವಾಗ ವಿದ್ಯುತ್ ತಂತಿ ತಗುಲಿದ ಪರಿಣಾಮವಾಗಿ ಬೆಂಕಿ ಹತ್ತಿಕೊಂಡಿದೆ. ಈ ವೇಳೆ ಲಾರಿಯಲ್ಲಿ ಇದ್ದ ಮೆಣಸಿನಕಾಯಿ ಮೂಟೆಗೆ ಬೆಂಕಿ ತಗುಲಿದೆ. ಬೆಂಕಿ ತಗುಲಿದ ಪರಿಣಾಮ ಲಾರಿಯಲ್ಲಿ ಇದ್ದ ಮೆಣಸಿನಕಾಯಿ ಬಹುತೇಕ ಸುಟ್ಟು ಕರಕಲಾಗಿವೆ.ಲಾರಿ ಚಾಲಕ ಸೇರಿದಂತೆ ಸ್ಥಳೀಯರ ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಲಾರಿಯಲ್ಲಿ ಇದ್ದ ಬಹುಪಾಲು ಮೆಣಸಿನಕಾಯಿ ಸುಟ್ಟು ಕರಕಲಾಗಿವೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ರಾಜ್ಯದಲ್ಲಿ ಮೆಣಸಿನಕಾಯಿಗೆ ಒಳ್ಳೆಯ ಬೆಲೆ ಇದ್ದ ಕಾರಣ ಅಕ್ಕಪಕ್ಕದ ರಾಜ್ಯದ ರೈತರು ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ತಮ್ಮ ಮೆಣಸಿನಕಾಯಿ ಮಾರಲು ಬರುತ್ತಿದ್ದಾರೆ.






 Advertisement 




Sign in to your account
Username or Email Address


Password

 Remember Me


