ಬೆಂಗಳೂರು: ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಬಿಗ್‍ಬಾಸ್ ಈಗಾಗಲೇ ಆರಂಭಗೊಂಡು ಮೂರು ದಿನ ಕಳೆದಿದೆ. ಸ್ಪರ್ಧಿಗಳು ತಮ್ಮ ಕಷ್ಟ-ಸುಖಗಳನ್ನು ಹಂಚಿಕೊಳ್ಳಲು ಆರಂಭಿಸಿದ್ದಾರೆ. ತಮ್ಮ ಜೀವನದಲ್ಲಿ ನಡೆದಿರುವ ಘಟನೆಗಳು, ಹೆತ್ತವರ ಬಗ್ಗೆಯೂ ಮೆಲುಕು ಹಾಕಿಕೊಳ್ಳುತ್ತಿದ್ದಾರೆ. ಅಂತೆಯೇ ಇದೀಗ ಶಂಕರ್ ಅಶ್ವಥ್ ಅವರು ಕೂಡ ತಮ್ಮ ತಂದೆಯನ್ನು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ.ಹೌದು. ಚಾಮಯ್ಯ ಮೇಷ್ಟ್ರು ಎಂದೇ ಖ್ಯಾತರಾಗಿರುವ ಹಿರಿಯ ನಟ ಅಶ್ವಥ್ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಹಾಗೆಯೇ ಅವರ ನಾಗರ ಹಾವು ಚಿತ್ರದ ಡೈಲಾಗ್ ಹೇಳುವಂತೆ ರಘು ಶಂಕರ್‍ಗೆ ಹೇಳುತ್ತಾರೆ. ಈ ವೇಳೆ ಡೈಲಾಗ್ ನೆನಪಿಲ್ಲ ಅಂತ ಹೇಳಿದ ಶಂಕರ್ ಅವರು ತಮ್ಮ ತಂದೆಯನ್ನು ನೆನಪು ಮಾಡಿಕೊಂಡು ಕಣ್ಣೀರಾದರು.ಸಾವಿಗೂ ಮುನ್ನ ಕೊನೆ ದಿನಗಳಲ್ಲಿ ಅವರಿದ್ದ ಸ್ಥಿತಿಯನ್ನು ಶಂಕರ್ ಅವರು ಇತರ ಸ್ಪರ್ಧಿಗಳ ಜೊತೆ ಹಂಚಿಕೊಂಡರು. ಶ್ಲೋಕಗಳನ್ನು ಹೇಳ್ತೀನಿ ಆದ್ರೆ ಧ್ಯಾನ ಮಾತ್ರ ನಮ್ಮ ಅಪ್ಪ ಅಂತ ಅಶ್ವಥ್ ಬಗ್ಗೆ ಮಾತನಾಡುತ್ತಾ ಗದ್ಗದಿತರಾದ್ರು. ಇದನ್ನೂ ಓದಿ: ಕಣ್ಣೊಡೆದು ಕರೆದ ದಿವ್ಯಾ ಸುರೇಶ್ – ನಾಚಿ ನೀರಾದ ಮಂಜುಅಪ್ಪ ತುಂಬಾ ಫೇಮಸ್ಸಾಗಿದ್ದರಿಂದ ಇಂದು ನಮಗೆ ಒಬ್ಬನ ವಿರುದ್ಧ ಕೆಟ್ಟದಾಗಿ ಬೈಯೋಕ್ಕಾಗಲ್ಲ, ಸಿಗರೇಟು ಸೇದುವಂತಿಲ್ಲ. ಕೋಮ ಮಾಡಿಕೊಳ್ಳುವಂತಿಲ್ಲ. ಏಯ್ ಅಶ್ವಥ್ ಅವರ ಮಗ ಹಿಂಗ್ ಮಾಡ್ತಾನಲ್ವಾ ಅಂತ ಟೀಕೆ ಮಾಡುತ್ತಾರೆ ಎಂದು ಶಂಕರ್ ಕಣ್ಣೀರಾದ್ರು.ಒಟ್ಟಿನಲ್ಲಿ ಈ ಬಾರಿಯ ಬಿಗ್ ಬಾಸ್ ಮನರಂಜನೆ ನೀಡುತ್ತಿದ್ದು, ಟಾಸ್ಕ್ ಗಳು ಆರಂಭವಾಗುತ್ತಿದ್ದಂತೆಯೇ ಕಿತ್ತಾಟವೂ ಶುರುವಾಗಿದೆ. ಅಲ್ಲದೆ ಸ್ಪರ್ಧಿಗಳು ತಮ್ಮ ತಮ್ಮ ಕಥೆಗಳನ್ನು ಹೇಳುತ್ತಾ ಇತರರನ್ನು ನಗಿಸುವ ಜೊತೆಗೆ ಕಣ್ಣೀರು ಹಾಕಿಸುತ್ತಿದ್ದಾರೆ.Sign in to your account
Username or Email Address


Password

 Remember Me


