ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಕ್ಯಾಮೆರಾ ಮುಂದೆ ಬಂದು ಮನಸ್ಸು ಬಿಚ್ಚಿ ಮಾತನಾಡಿರುವ ಎಷ್ಟೋ ಉದಾಹರಣೆಗಳಿವೆ. ಹಾಗೆಯೇ ಇದೀಗ ನಿಧಿ ಸುಬ್ಬಯ್ಯ 3ನೇ ದಿನವೇ ಬಿಗ್‍ಬಾಸ್ ಬಳಿ ಒಂದು ಬೇಡಿಕೆ ಇಟ್ಟಿದ್ದಾರೆ.ಪ್ರಶಾಂತ್ ಸಂಬರ್ಗಿ ಅವರು ಕಾಫಿ ಪೌಡರ್ ಖಾಲಿ ಮಾಡಿದ್ದಾರೆ. ಅವರನ್ನು ಜೈಲಿಗೆ ಹಾಕಿ ಕಾಫಿ ಪೌಡರ್ ಕಳಿಸಿ ಬಿಗ್ ಬಾಸ್. ಸ್ವಿಮ್ಮಿಂಗ್ ಪೂಲ್ ಟಾಸ್ಕ್ ನಿಂದ ನನ್ನ ಮೂಗು, ತಲೆಯಲ್ಲಿ ನೀರು ಸೇರಿಕೊಂಡು ಬಿಟ್ಟಿದೆ ದಯವಿಟ್ಟು ಕಳಿಸಿಕೊಡಿ, ನನಗೆ ಕಾಫಿ ಇಲ್ಲದೇ ಆಗುತ್ತಿಲ್ಲ, ಬೇಕಾದರೆ ಪ್ರಶಾಂತ್ ಅವರನ್ನು ಜೈಲಿಗೆ ಹಾಕಿ ಎಂದು ನಿಧಿ ಮನವಿ ಮಾಡಿದ್ದಾರೆ. ಈ ವೇಳೆ ಜೊತೆಗೆ ಇದ್ದ ರಾಜೀವ್ ಕೂಡ ಹೌದು ಬಿಗ್ ಬಾಸ್ ನನ್ನ ಗಂಟಲು ಕೆಟ್ಟುಹೋಗಿದೆ.. ದಯವಿಟ್ಟು ಸ್ವಲ್ಪ ಕಾಫಿ ಪೌಡರ್ ಕಳಿಸಿಕೊಡಿ ಎಂದು ಕ್ಯಾಮೆರಾ ಮುಂದೆ ಕೇಳಿಕೊಂಡಿದ್ದಾರೆ.ಮನೆಯ ಸದಸ್ಯರೊಂದಿಗೆ ಹೇಳಿಕೊಳ್ಳಲಾಗದ ಎಷ್ಟೋ ವಿಷಯವನ್ನು ಮನೆ ಸದಸ್ಯರು ಕ್ಯಾಮೆರಾ ಮುಂದೆ ಹೇಳಿಕೊಳ್ಳುತ್ತಾರೆ. ಇದೀಗ ಬಿಗ್‍ಬಾಸ್ ಇವರ ಕೋರಿಕೆಯನ್ನು ನೇರವೇರಿಸುತ್ತಾರಾ ಎಂದು ಕಾದು ನೋಡಬೇಕಿದೆ. ಒಂದು ಕಾಫಿಗಾಗಿ ಪ್ರಶಾಂತ್ ಅವರನ್ನು ಜೈಲಿಗೆ ಹಾಕಿ ನಮಗೆ ಕಾಫಿ ಕಳಿಸಿಕೊಡಿ ಎಂದು ಕೇಳಿರುವ ನಿಧಿ ಸುಬ್ಬಯ್ಯ ಅವರ ಆಟದ ವೈಖರಿ ಮತ್ತು ಬುದ್ದಿವಂತಿಕೆ ಕುರಿತಾಗಿ ನೆಟ್ಟಿಗರು ಮೆಚ್ಚಿದ್ದಾರೆ. ಮನೆಯಲ್ಲಿ ಆಟದ ರಂಗು ಏರಿದೆ. ಅಭಿಮಾನಿಗಳಲ್ಲಿ ಬಿಗ್‍ಬಾಸ್ ಕುರಿತಾದ ನೀರಿಕ್ಷೆ ಅಧಿಕವಾಗುತ್ತಿದೆ.






 Advertisement 




Sign in to your account
Username or Email Address


Password

 Remember Me


