ಕೋಲಾರ: ಪಬ್ಲಿಕ್ ಟಿವಿ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ರಾಜ್ಯದಲ್ಲಿ ಹಮ್ಮಿಕೊಂಡಿರುವ ಜ್ಞಾನ ದೀವಿಗೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಂದು ಕೋಲಾರ ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯ 60 ವಿದ್ಯಾರ್ಥಿಗಳಿಗೆ 29 ಟ್ಯಾಬ್‍ಗಳನ್ನು ವಿತರಿಸಲಾಯಿತು.ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅವರು 29 ಟ್ಯಾಬ್‍ಗಳನ್ನು ದಾನವಾಗಿ ನೀಡಿದ್ದು, ಕೋಲಾರ ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯ 60ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿ 60 ಮಕ್ಕಳಿಗೆ 29 ಟ್ಯಾಬ್‍ಗಳನ್ನ ಗೋವಿಂದಗೌಡ ಸೇರಿದಂತೆ ಗಣ್ಯರು ವಿತರಿಸಿದರು. ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯ 60 ಮಕ್ಕಳಿಗೆ ದಾನಿಗಳಾದ ಗೊವಿಂದಗೌಡ ಅವರ ಕೈಯಲ್ಲಿ 29 ಟ್ಯಾಬ್‍ಗಳನ್ನ ವಿತರಣೆ ಮಾಡಲಾಯಿತು. ಅಷ್ಟೇ ಉತ್ಸಾಹದಿಂದ ಮಕ್ಕಳು ಟ್ಯಾಬ್‍ಗಳನ್ನ ಪಡೆದು ಉತ್ತಮ ಅಭ್ಯಾಸ ಮಾಡಿ ಶಾಲೆಗೆ ಹಾಗೂ ಪೋಷಕರಿಗೆ ಉತ್ತಮ ಹೆಸರು ತರುವುದಾಗಿ ತಿಳಿಸಿದರು.Sign in to your account
Username or Email Address


Password

 Remember Me


