ವಿಜಯಪುರ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ಊರಿಗೆ ಬಂದ ವೀರ ಯೋಧನಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದ್ದಾರೆ.ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ರಾಘವೇಂದ್ರ ಸಂಗಪ್ಪ ಕ್ಷತ್ರಿಯ ಅವರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು. ನಾಲತವಾಡ ಪಟ್ಟಣದ ವೀರೇಶ್ವರ ಸರ್ಕಲ್ ನಿಂದ ತೆರೆದ ವಾಹನದಲ್ಲಿ ಬಸವೇಶ್ವರ ಸರ್ಕಲ್ ಮೂಲಕ ಗಣಪತಿ ಸರ್ಕಲ್ ವರೆಗೂ ಅದ್ಧೂರಿ ಮೆರವಣಿಗೆ ನಡೆಸಲಾಯಿತು.ನಂತರ ವೀರೇಶ್ವರ ಮಠದಲ್ಲಿ ರಾಘವೇಂದ್ರ ಕ್ಷತ್ರಿಯ ಅವರಿಗೆ ಸನ್ಮಾನ ಮಾಡಿ, ಇನ್ನುಳಿದ ವೀರ ಯೋಧರಿಗೆ ಲಕ್ಷೀ ವೇಂಕಟೇಶ್ವರ ದೇವಸ್ಥಾನದಲ್ಲಿ ಸನ್ಮಾನ ಮಾಡಲಾಯಿತು. ನಿವೃತ್ತಿಗೊಂಡು ಊರಿಗೆ ಆಗಮಿಸಿದ ಯೋಧನಿಗೆ ಮೆರವಣಿಗೆ ವೇಳೆ ಸುಮಂಗಲೆಯರು ಆರತಿ ಎತ್ತಿದರು. ಇನ್ನೊಂದೆಡೆ ಸ್ಥಳೀಯರು ಹೂಮಳೆ ಸುರಿಸಿ ಸ್ವಾಗತಿಸಿದರು.Sign in to your account
Username or Email Address


Password

 Remember Me


