ಬೆಂಗಳೂರು: ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಂತ್ರಿ ಅಜ್ಞಾತ ಸೇರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಸಿಡಿ ಬಿಡುಗಡೆಯಾಗುತ್ತಿದ್ದಂತೆಯೇ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಸಾಹುಕಾರ, ಸಿಎಂ ಭೇಟಿ ಮಾಡಿ ಹೈಕಮಾಂಡ್ ಭೇಟಿ ಮಾಡಲು ದೆಹಲಿಗೆ ಹೋಗ್ತೀನಿ ಎಂದು ಹೇಳಿದ್ದರು. ಆದರೆ ದೆಹಲಿಗೆ ಹೊರಟ ಸಚಿವರು ಹೋಗಿದ್ದು ಎಲ್ಲಿಗೆ ಎಂಬ ಪ್ರಶ್ನೆ ಇದೀಗ ಎದ್ದಿದೆ. ಖಾಸಗಿ ಕಾರಿನಲ್ಲಿ ರಾತ್ರೋರಾತ್ರಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.ಬೆಳಗಾವಿ ಸಾಹುಕಾರ್ ಬೆಂಗಳೂರಿನಲ್ಲಿದ್ದಾರಾ..? ಬೆಳಗಾವಿಗೆ ಹೋದ್ರಾ..? ದೆಹಲಿಗೆ ಹೋಗಿದ್ದಾರಾ..? ಎಂಬ ಕುರಿತು ಇದೀಗ ಚರ್ಚೆಯಾಗುತ್ತಿದೆ. ಸಿಎಂ ಭೇಟಿ ಮಾಡಿ ದೆಹಲಿಗೆ ಹೋಗ್ತೀನಿ ಅಂತ ನಿನ್ನೆ ರಾತ್ರಿ ಬೆಂಗಳೂರು ನಿವಾಸದಿಂದ ಹೊರಟಿದ್ದ ಸಾಹುಕಾರ್, ಇದುವರೆಗೂ ಸಿಎಂ ಬಿಎಸ್‍ವೈ ಭೇಟಿ ಮಾಡಿಲ್ಲ. ಹೀಗಾಗಿ ಅಜ್ಞಾತ ಸ್ಥಳದಲ್ಲಿದ್ದೇ ಅದೇನು ಪ್ರಕರಣದಿಂದ ತಮ್ಮನ್ನು ಪಾರು ಮಾಡಿಕೊಳ್ಳಲು ತಂತ್ರ ಹೂಡುತ್ತಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.ಇತ್ತ ಸದಾಶಿವನಗರದ ರಮೇಶ್ ಜಾರಕಿಹೊಳಿಯ ‘ಭಾಗ್ಯಲಕ್ಷ್ಮಿ’ ನಿವಾಸ ಭಣ ಭಣ ಎನ್ನುತ್ತಿದೆ.Sign in to your account
Username or Email Address


Password

 Remember Me


