ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಬಗ್ಗೆ ದೂರು ದಾಖಲಿಸಿರುವ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಿರುದ್ಧವೇ ದೂರು ದಾಖಲಾಗಿದೆ.ನಗರದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕರ್ನಾಟಕ ಕನ್ನಡಪರ ಸಂಘಟನೆ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಪುಟ್ಟೇಗೌಡರು ದೂರು ದಾಖಲಿಸಿದ್ದಾರೆ.ಇದು ಇಬ್ಬರ ಸಮ್ಮತಿಯಿಂದ ನಡೆದಿರುವ ದೈಹಿಕ ಕ್ರಿಯೆ. ರಮೇಶ್ ಜಾರಕಿಹೊಳಿ ಖಾಸಗಿ ವಿಡಿಯೋ ವೈರಲ್ ಮಾಡಿಸಿದ್ದಾರೆ. ದಿನೇಶ್ ಕಲ್ಲಹಳ್ಳಿಗೂ ಈ ವೀಡಿಯೋಗೂ ಏನು ಸಂಬಂಧ? ಅವರ ಚಾರಿತ್ರ್ಯ ವಧೆ ಮಾಡಲು ನಡೆದಿರುವ ಕುತಂತ್ರ ಇದು ಎಂದು ಪುಟ್ಟೇಗೌಡರು ಆರೋಪಿಸಿದ್ದಾರೆ.ಖಾಸಗಿ ಜೀವನದಲ್ಲಿ ಏನು ಬೇಕಾದರೂ ಮಾಡಿಕೊಳ್ಳಬಹುದು. ಅದನ್ನು ಚಿತ್ರೀಕರಿಸಿ ಬಿತ್ತರಿಸಿರುವುದು ತಪ್ಪು. ಯುವತಿಗೆ ಅನ್ಯಾಯವಾಗಿದ್ದರೆ ಆಕೆಯೇ ದೂರು ನೀಡಬಹುದಿತ್ತು. ತಕ್ಷಣ ದಿನೇಶ್ ಕಲ್ಲಹಳ್ಳಿ ಬಂಧಿಸಿ, ವಿಚಾರಣೆ ನಡೆಸಬೇಕೆಂದು ಪುಟ್ಟೇಗೌಡರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.Sign in to your account
Username or Email Address


Password

 Remember Me


