ಬೆಂಗಳೂರು: ಭಾರತೀಯ ಜನತಾ ಪಕ್ಷಕ್ಕೆ ಮಾನ-ಮರ್ಯಾದೆ ಅನ್ನೋದು ಇದ್ದರೆ, ಮನುಷ್ಯನ ಮೌಲ್ಯಗಳಿಗೆ ಬೆಲೆ ಕೊಡಬೇಕು ಅನ್ನೋದಾದರೆ ಕೂಡಲೇ ಅವನ ರಾಜೀನಾಮೆ ತೆಗೆದುಕೊಳ್ಳಬೇಕು. ಈ ಕಾಮಕಾಂಡ ವಿಚಾರ ರಾಷ್ಟ್ರ ತುಂಬಾ ಗೊತ್ತಾಗಿರುವಂಥದ್ದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಔಟ್ ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮಾನ ಮರ್ಯಾದೆ ಇರುವ ಸರ್ಕಾರ ಕೂಡಲೇ ರಮೇಶ್ ಜಾರಕಿಹೊಳಿ ರಾಜೀನಾಮೆ ತಗೋಬೇಕು. ಅಲ್ಲದೆ ತಕ್ಷಣವೇ ಎಫ್‍ಐಆರ್ ರಿಜಿಸ್ಟರ್ ಮಾಡಬೇಕು ಎಂದು ಆಗ್ರಹಿಸಿದರು.ಈ ಹಿಂದೆ ಹೆಚ್.ವೈ ಮೇಟಿ ಪ್ರಕರಣ ಈ ರೀತಿಯಾಗಿರಲಿಲ್ಲ. ಆ ಸಿಡಿಯಲ್ಲಿ ಏನೂ ಇರಲಿಲ್ಲ. ಆದರೂ ನಾನು ರಾಜೀನಾಮೆ ತೆಗೆದುಕೊಂಡಿದ್ದೇನೆ. ಸಾರ್ವಜನಿಕ ಜೀವನದಲ್ಲಿ ಪ್ರಜಾತಂತ್ರ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಅನ್ನೋದಾದರೆ ಅವರು ನಿನ್ನೆನೇ ರಾಜೀನಾಮೆ ತೆಗೆದುಕೊಳ್ಳಬೇಕಿತ್ತು ಎಂದರು.ಮೇಟಿಯವರು ಕೂಡ ವೀಡಿಯೋವನ್ನು ಫೇಕ್ ಎಂದು ಹೇಳಿದ್ದರು. ಈ ಪ್ರಕರಣ ಸಂಬಂಧ ಸಿಬಿಐ ತನಿಖೆ ಆಮೇಲೆ ಮಾಡಲಿ. ಈಗ ಮಾನ-ಮರ್ಯಾದೆ ಇದ್ದರೆ ರಾಜೀನಾಮೆ ತೆಗೆದುಕೊಳ್ಳಬೇಕೋ, ಬೇಡವೋ ಎಂದು ಪ್ರಶ್ನಿಸಿದರು. ಮೇಟಿ ರಾಜೀನಾಮೆಯನ್ನು ನಾವು ಯಾಕೆ ತೆಗೆದುಕೊಂಡಿದ್ದೇವೆ..? ಆ ಸಿಡಿಯಲ್ಲಿ ಏನೂ ಇರಲಿಲ್ಲ. ಆದರೆ ಇದು ತಲೆ ತಗ್ಗಿಸುವಂತಹ ರೀತಿಯಲ್ಲಿದೆ ಎಂದರು.ಇದೇ ವೇಳೆ ಯಡಿಯೂರಪ್ಪ ಕರಪ್ಟ್, ಸಿದ್ದರಾಮಯ್ಯ ಒಳ್ಳೆಯ ವ್ಯಕ್ತಿ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸತ್ಯವನ್ನು ಹೇಳಿದ್ದಾರೆ ಅಂದ್ರು.Sign in to your account
Username or Email Address


Password

 Remember Me


