ಬೆಂಗಳೂರು: ರಾಜಕಾರಣಿಗಳಿಗೆ ಅಸಹ್ಯವಾಗ್ತಿದೆ. ನಾವು ರಾಜಕಾರಣಿಗಳು ಅಂತ ಹೇಳಿಕೊಳ್ಳೋಕೆ ಅಸಹ್ಯವಾಗ್ತಿದೆ. ಮಕ್ಕಳು, ಫ್ಯಾಮಿಲಿ ಹೇಗೆ ನೋಡ್ತಾರೆ ಅನ್ನೋದು ವ್ಯಥೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.ಸಾಹುಕಾರನ ರಾಸಲೀಲೆ ಸಿಡಿ ಔಟ್ ಪ್ರಕರಣ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಇವತ್ತು ಜನ ನಮ್ಮನ್ನ ಥೂ..ಛೀ.. ಅಂತ ಉಗಿತಿದ್ದಾರೆ. ಆ ವೀಡಿಯೋದಲ್ಲಿ ಯಡಿಯೂರಪ್ಪನವರು ಭ್ರಷ್ಟ ಅಂತ ಹೇಳಿದ್ದಾರೆ. ಇದಕ್ಕೆ ಯಡಿಯೂರಪ್ಪ ಹಾಗೂ ಕಟೀಲ್ ಅವರೇ ಉತ್ತರ ಕೊಡಬೇಕು. ನಾವು ಉತ್ತರ ಕೋಡೋ ಸಮಯ ಬರುತ್ತೆ ಎಂದು ಡಿಕೆಶಿ ಹೇಳಿದರು.ಇತ್ತ ಸಹೋದರನ ಪರ ಬ್ಯಾಟಿಂಗ್ ಮಾಡಿರುವ ಬಾಲಚಂದ್ರ ಜಾರಕಿಹೊಳಿ, ರಮೇಶ್ ದೆಹಲಿಗೆ ಹೋಗಲ್ಲ, ಬೆಂಗಳೂರಿನಲ್ಲಿಯೇ ಇರುತ್ತಾರೆ. ಸಿಡಿಯಲ್ಲಿದ್ದ ಯುವತಿ ಯಾರು ಅಂತ ಗೊತ್ತಾಗಬೇಕಿದೆ. ಅವಳ ಹೆಸರು ಗೊತ್ತಾಗಬೇಕು. ಇದೊಂದು ನಕಲಿ ವಿಡಿಯೋ ಅಂತ ತನಿಖೆಗೆ ಸಿಎಂಗೆ ಒತ್ತಾಯಿಸಿದ್ದೇವೆ. ಇದು ನಿಜ ಆಗಿದ್ರೆ ರಮೇಶ್ ಜಾರಕಿಹೊಳಿಗೆ ನಿವೃತ್ತಿ ತೆಗೆದುಕೊಳ್ಳಲು ಹೇಳ್ತೀನಿ. ವಕೀಲರ ಜೊತೆ ಮಾತನಾಡಿ 100ಕೋಟಿ ಮಾನನಷ್ಟ ಮೊಕದ್ದಮೆ ಹಾಕ್ತೀವಿ ಎಂದರು.ರಮೇಶ್ ಜಾರಕಿಹೊಳಿ ಸಿಎಂರನ್ನು ಭೇಟಿಯಾಗ್ತಾರೆ. ಇದು ತನಿಖೆಯಾಗಬೇಕು. ಯೂ ಟ್ಯೂಬ್ ನಲ್ಲಿ ದುಬೈನಲ್ಲಿ ಅಪ್ ಲೋಡ್ ಆಗಿದೆ ಅಂತಾರೆ. ಇದು ಸಿಐಡಿ ಸಿಒಡಿ ತನಿಖೆಗೆ ಕೊಡಬೇಕು. ಸಂತ್ರಸ್ತೆ ಯಾರು ಅನ್ನುವುದು ಗೊತ್ತಾಗಬೇಕು. ಹಾದಿ ಬೀದಿಯಲ್ಲಿ ಇದ್ದವರು ಬಂದು ವೀಡಿಯೋ ಬಿಡುಗಡೆ ಮಾಡಿದ್ದಾರೆ. ವೀಡಿಯೋ ಫೇಕ್ ಆಗಿದೆ. ಒಂದು ವೇಳೆ ತನಿಖೆಯಲ್ಲಿ ರಮೇಶ್ ಅನ್ನೋದು ಗೊತ್ತಾದ್ರೆ, ಅವರನ್ನೇ ನಿವೃತ್ತಿ ನೀಡಲು ತಿಳಿಸುತ್ತೇನೆ ಎಂದು ಹೇಳಿದರು.ಬಿಜೆಪಿಯವರು ರಿಲೀಸ್ ಮಾಡಿಸಿಲ್ಲ. ಬದಲಾಗಿ ಪ್ರಭಾವಿ ರಾಜಕಾರಣಿ ಇದ್ದಾರೆ. ಸಿಡಿ ರಿಲೀಸ್ ಮಾಡಿದವರ ವಿರುದ್ಧ ನೂರು ಕೋಟಿ ಮಾನನಷ್ಟ ಮೊಕದ್ದಮೆ ಹಾಕಲು ನಿರ್ಧರಿಸುತ್ತೇವೆ. ತನಿಖೆ ಆಗಲೇ ಬೇಕು. ಯಾವುದೇ ಕಾರಣಕ್ಕೂ ರಮೇಶ್ ರಾಜೀನಾಮೆ ಕೊಡಬಾರದು. ತನಿಖೆಯಾದ ನಂತರ ರಾಜೀನಾಮೆ ಕೊಟ್ಟು ಹೊರ ಹೋಗಲಿ ಎಂದು ತಿಳಿಸಿದರು.Sign in to your account
Username or Email Address


Password

 Remember Me


