ಬೆಂಗಳೂರು: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಲೈಂಗಿಕ ಚಟ ತೀರಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕೃತ್ಯಕ್ಕೆ ದೆಹಲಿಯ ಕರ್ನಾಟಕ ಭವನವನ್ನು ರಮೇಶ್ ಜಾರಕಿಹೊಳಿ ಬಳಸಿಕೊಂಡಿದ್ದು, ಕಾಮದಾಟದ ವೀಡಿಯೋ ಇದೀಗ ವೈರಲ್ ಆಗಿದೆ.ಡ್ರೋನ್ ಕ್ಯಾಮೆರಾಗಳ ಮೂಲಕ ಕರ್ನಾಟಕದ ಡ್ಯಾಂ ಗಳನ್ನು ಚಿತ್ರೀಕರಣ ಮಾಡಲು ಬಯಸಿದ್ದ ಯುವತಿ ಸಹಾಯಕ್ಕೆಂದು ರಮೇಶ್ ಜಾರಕಿಹೊಳಿಯವರನ್ನು ಭೇಟಿಯಾಗಿದ್ದರು. ಈ ವೇಳೆ ಅಧಿಕಾರ ದುರುಪಯೋಗ ಮಾಡಿಕೊಂಡು ಜಾರಕಿಹೊಳಿ ಲೈಂಗಿಕ ತೃಷೆ ತೀರಿಸಿಕೊಂಡಿದ್ದಾರೆ ಎಂದು ದೂರುದಾರ ದಿನೇಶ್ ಕಲ್ಲಹಳ್ಳಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರಿನ ಜೊತೆ ಸಿಡಿ ನೀಡಿದ್ದಾರೆ.ನಾಳೆ ಮಧ್ಯಾಹ್ನ 2ಕ್ಕೆ ಸಿಎಂ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಚಿವ ಸಂಪುಟ ಸಭೆಗೆ ರಮೇಶ್ ಜಾರಕಿಹೊಳಿ ಬರ್ತಾರಾ ಎಂಬ ಪ್ರಶ್ನೆ ಇದೀಗ ಎದ್ದಿದೆ. ಸಂಪುಟ ಸಭೆಯಲ್ಲೂ ಸಾಹುಕಾರ್ ರಾಸಲೀಲೆಯದ್ದೇ ಚರ್ಚೆಯಾಗುವ ಸಾಧ್ಯತೆ ಇದೆ. ಇದರಿಂದಾಗಿ ಸಂಪುಟ ಸಚಿವರು ಭಾರೀ ಮುಜುಗರಕ್ಕೊಳಗಾಗಿದ್ದು, ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಸಂಪುಟ ಸಚಿವರು ಆಕ್ರೋಶ ವ್ಯಕ್ತಪಡಿಸುವ ಸಾಧ್ಯತೆ ಇದೆ.ರಮೇಶ್ ಜಾರಕಿಹೊಳಿ ರಾಸಲೀಲೆಗೆ ಇಡೀ ಬಜೆಟ್ ಅಧಿವೇಶನ ಬಲಿಯಾಗುತ್ತಾ ಎಂಬ ಪ್ರಶ್ನೆ ಇದೀಗ ಎದ್ದಿದ್ದು, ಮಾರ್ಚ್ 4 ರಿಂದ 31 ರವರೆಗೆ ನಡೆಯಲಿರುವ ಬಜೆಟ್ ಅಧಿವೇಶನ ನಡೆಯಲಿದೆ. ಪ್ರತಿಪಕ್ಷಗಳಿಗೂ ಇದೀಗ ಭರ್ಜರಿ ಅಸ್ತ್ರ ಸಿಕ್ಕಂತಾಗಿದೆ. ರಮೇಶ್ ಜಾರಕಿಹೊಳಿ ಮೈತ್ರಿ ಸರ್ಕಾರ ಕೆಡವಿದ ಸಿಟ್ಟಲ್ಲಿರುವ ಪ್ರತಿಪಕ್ಷಗಳು, ಈ ರಾಸಲೀಲೆ ಪ್ರಕರಣ ಇಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬೀಳಲು ಪ್ಲಾನ್ ಮಾಡಿವೆ. ಹೀಗಾಗಿ ಬಜೆಟ್ ಅಧಿವೇಶನದಲ್ಲಿ ಈ ಸಿಡಿ ಪ್ರಕರಣ ದೊಡ್ಡ ಸದ್ದು ಮಾಡಲಿದೆ.Sign in to your account
Username or Email Address


Password

 Remember Me


