ನೆಲಮಂಗಲ: ಎರಡನೇ ದಿನವೂ ಉತ್ಸಾಹದಿಂದ ಆಸ್ಪತ್ರೆ ಕಡೆ ಮುಖಮಾಡಿದ ವಯೋವೃದ್ಧರು, ಯುವಕರು ನಾಚುವಂತೆ ಕೊವೀಡ್ ಲಸಿಕೆ ಹಾಕಿಸಿಕೊಂಡು ಲವಲವಿಕೆಯಿಂದ ತಮ್ಮ ಉತ್ಸಾಹವನ್ನು ತೋರಿದ್ದಾರೆ.ಬೆಂಗಳೂರು ಹೊರವಲಯ ನೆಲಮಂಗಲ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ವೃದ್ಧ ದಂಪತಿ ಅತ್ಯಂತ ಉತ್ಸಾಹದಿಂದ ಕೋವಿಡ್ 19 ಲಸಿಕೆ ಪಡೆದುಕೊಂಡಿದ್ದು ಕಂಡು ಬಂತು. ವ್ಯಾಕ್ಸಿನ್ ಪಡೆದುಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧರು ಆಸ್ಪತ್ರೆಯಲ್ಲಿ ಜಮಾಯಿಸಿದ್ದರು.90 ವರ್ಷದ ವೃದ್ಧೆ ಕೂಡ ಕೊವೀಡ್-19 ಲಸಿಕೆ ಪಡೆದುಕೊಂಡರು. ಯುವಕರನ್ನು ಕೂಡ ನಾಚಿಸುವಂತೆ ವೃದ್ಧರು ನಗುನಗುತ್ತಲೇ ಆಸ್ಪತ್ರೆಗೆ ಬಂದು ಲಸಿಕೆ ಪಡೆದುಕೊಂಡರು. ಎಲ್ಲಾ ರೀತಿಯಲ್ಲಿ ತಪಾಸಣೆ ಮಾಡಿದ ಬಳಿಕ ಲಸಿಕೆ ನೀಡುತ್ತಿರುವ ವೈದ್ಯರು ಹೆಚ್ಚು ಎಚ್ಚರಿಕೆ ತೆಗೆದುಕೊಂಡಿದ್ದಾರೆ.


 Advertisement 







 Advertisement 




Sign in to your account
Username or Email Address


Password

 Remember Me


