ಕೊಪ್ಪಳ: ರಾಜ್ಯದಲ್ಲಿ ಇಬ್ಬರು ಸುಳ್ಳು ಹೇಳುವವರು ಇದ್ದಾರೆ. ಡಿಕೆ. ಶಿವಕುಮಾರ್, ಸಿದ್ದರಾಮಯ್ಯ ಇಬ್ಬರು ಸುಳ್ಳು ಹೇಳುವವರು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.ಕುಷ್ಟಗಿಯಲ್ಲಿ ನಡೆದ ಗ್ರಾ.ಪಂ ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಬ್ಬರನ್ನು ಕರೆದುಕೊಂಡು ಬಂದು ಇಲ್ಲಿ ನಿಲ್ಲಿಸಬೇಕು. ಸುಳ್ಳು ಹೇಳೋದರಲ್ಲಿ ಲೆಕ್ಕವೇ ಇಲ್ಲವಾಗಿದೆ. ಒಂದು ಕಡೆ ಸಿದ್ದರಾಮಯ್ಯ ಪಾರ್ಟಿ, ಮತ್ತೊಂದು ಕಡೆ ಡಿಕೆ ಶಿವಕುಮಾರ್ ಪಾರ್ಟಿಯಾಗಿದೆ. ರಾಜ್ಯದಲ್ಲಿ ನೇರವಾಗಿ ಬೆತ್ತಲಾಗಿದ್ದಾರೆ. ಸಿದ್ದರಾಮಯ್ಯ ರೆಸಾರ್ಟ್ ಗೆ ಹೋಗ್ತಾರೆ. ಡಿ.ಕೆ ಶಿವಕುಮಾರ್ ನಂದೇನೂ ಪಾತ್ರ ಇಲ್ಲ ತನ್ವೀರ್ ಸೇಠ್ ಕೇಳಿ ಅಂತಾರೆ. ಕಾಂಗ್ರೆಸ್ಸಿಗೆ ಎಂತಹ ಸ್ಥಿತಿ ಬಂದಿದೆ ಎಂದು ವ್ಯಂಗ್ಯವಾಡಿದ್ರು.ಕಾಂಗ್ರೆಸ್ ಪಕ್ಷಕ್ಕೆ ಪರ್ಮನೆಂಟ್ ರಾಷ್ಟ್ರೀಯ ಅಧ್ಯಕ್ಷರೇ ಇಲ್ಲ. ಈಗಿನ ಕಾಂಗ್ರೆಸ್ ನಾಯಕ ಯಾರೀ ಎಂದು ಪ್ರಶ್ನೆ ಮಾಡಿದ್ರು. ಅವರ ಹೆಸರು ಹೇಳಿದ್ರೆ ಬಾಯಲ್ಲಿ ಹುಳ ಬೀಳತ್ತದೆ. ಕಾಂಗ್ರೆಸ್ ಪಕ್ಷ ನಮಗೆಲ್ಲ ಹೆಮ್ಮೆ ಆಗಿತ್ತು. ಆದರೆ ಈಗಿನ ಕಾಂಗ್ರೆಸ್ಸಿನಲ್ಲಿ ನಾಯಕರೇ ಇಲ್ಲವಾಗಿದೆ. ಸುಭಾಷ್ ಚಂದ್ರ ಬೋಸ್, ಮಹಾತ್ಮಾ ಗಾಂಧಿ, ಸಾವರ್ಕರ್ ಕಾಂಗ್ರೆಸ್ ನಮಗೆ ಹೆಮ್ಮೆ ಇದೆ. ಇದೀಗ ಕಾಂಗ್ರೆಸ್ಸಿನಲ್ಲಿ ಒಬ್ಬರನ್ನ ಕಂಡ್ರೆ ಒಬ್ಬರಿಗೆ ಆಗುತ್ತಿಲ್ಲ ಎಂದರು.ಸಿದ್ದರಾಮಯ್ಯ ಗೋ ಶಾಪದಿಂದಲೇ ಸೋತಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆಶಿದು ಎರಡು ಮುಖವಾಗಿದೆ. ಈಕಡೆ ಒಬ್ರು ಎಳೀತಾರೆ, ಆ ಕಡೆ ಒಬ್ರು ಎಳೀತಾರೆ. ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹೇಳ್ತಾರೆ. ನಾನೇ ಮುಖ್ಯಮಂತ್ರಿ ಎಂದು ಡಿಕೆಶಿ ಹೇಳ್ತಾರೆ. ಮೊದಲು ಗೆದ್ದು ಬನ್ನಿ ನೋಡೋಣ ಎಂದ ಈಶ್ವರಪ್ಪ ಸವಾಲು ಹಾಕಿದ್ರು.ಸಿದ್ದರಾಮಯ್ಯ ಮತ್ತೆ ಅಧಿಕಾರಕ್ಕೆ ಬಂದ್ರೆ ನಾವು ಗೋ ಹತ್ಯೆ ಮಾಡ್ತೀವಿ ಎಂದು ಹೇಳ್ತಾರೆ. ಹಾಗಾಗಿ ಗೋ ಮಾತೆ ಶಾಪದಿಂದ ಕಾಂಗ್ರೆಸ್ ಸರ್ಕಾರ ಹೊಯ್ತು. ರಾಮ ಮಂದಿರ ನಿರ್ಮಾಣದ ಲೆಕ್ಕ ಕೇಳಲು ಸಿದ್ದರಾಮಯ್ಯ ಯಾರು..?, ಸಿದ್ದರಾಮಯ್ಯ ಆಯೋಧ್ಯೆ ವಿವಾದಿತ ಜಾಗ ಎಂದು ಹೇಳ್ತಾರೆ. ಸುಪ್ರೀಂ ಕೋರ್ಟ್ ಹೇಳಿದ ನಂತರವೂ ಅದು ಹೇಗೆ ವಿವಾದಿತ ಆಗತ್ತೆ ಎಂದು ಈಶ್ವರಪ್ಪ ಪ್ರಶ್ನಿಸಿದರು.






 Advertisement 




Sign in to your account
Username or Email Address


Password

 Remember Me


