ಮೈಸೂರು: ಹೆಮ್ಮರವಾಗಿ ಬೆಳೆದಿದ್ದ ಅರಳಿ ಮರವನ್ನು ರಾತ್ರೋ ರಾತ್ರಿ ಕಿಡಿಗೇಡಿಗಳು ಕಡಿದ ಹಾಕಿದ ಪರಿಣಾಮ ಬೇಸರಗೊಂಡ ಸ್ಥಳೀಯರು ಕಡಿದ ಮರದ ಬುಡಕ್ಕೆ ‘ನನ್ನ ಸಾವಿಗೆ ಮನುಷ್ಯರೇ ಕಾರಣ’ ಎಂದು ನಾಮಫಲಕ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.ಮೈಸೂರಿನ ಶ್ರೀರಾಂಪುರದಲ್ಲಿ ಅರಳಿ ಮರವೊಂದು ಹಲವು ವರ್ಷಗಳಿಂದ ಬೆಳೆದು ಹೆಮ್ಮರವಾಗಿತ್ತು. ಆದರೆ ರಾತ್ರಿ ಕಿಡಿಗೇಡಿಗಳು ಮರವನ್ನು ಕಡಿದು ಕದ್ದು ಸಾಗಿಸಿದ್ದಾರೆ. ಪ್ರತಿದಿನ ಕಣ್ಣೇದುರಿಗೆ ದೊಡ್ಡದಾಗಿ ಕಾಣುತ್ತಿದ್ದ ಮರ ಕಾಣಿಸದೇ ಇದ್ದಾಗ ಸ್ಥಳೀಯರು ಬೇಸರ ವ್ಯಕ್ತಪಡಿಸಿ ಮರದ ಬುಡಕ್ಕೆ ವಿಶೇಷವಾಗಿ ಶ್ರದ್ಧಾಂಜಲಿ ನೆರವೇರಿಸಿದ್ದಾರೆ.
ಸ್ಥಳೀಯರೆಲ್ಲರು ಸೇರಿ ಅರಳಿ ಮರದ ಬುಡಕ್ಕೆ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ, ಒಂದು ನಿಮಿಷ ಮೌನಾಚರಣೆ ಮಾಡಿ, ಮರ ಕಡಿದವರ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ದಾಖಲಿಸಿದ್ದಾರೆ. ಮರವನ್ನು ಕಡಿದ ಕಿಡಿಗೇಡಿಗಳು ಸಿಕ್ಕರೆ ಸನ್ಮಾನ ಮಾಡಲು ಸಾರ್ವಜನಿಕರು ತೀರ್ಮಾನ ಮಾಡಿದ್ದಾರೆ.


 Advertisement 







 Advertisement 




Sign in to your account
Username or Email Address


Password

 Remember Me


