ರಾಯಚೂರು: ರಸ್ತೆ ಪಕ್ಕದಲ್ಲಿದ್ದ ನೀರಿನ ಟ್ಯಾಂಕ್‍ಗೆ ಬೈಕ್ ಡಿಕ್ಕಿ ಹೊಡೆದು ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಆಲ್ಕೋಡ್ ಗ್ರಾಮದ ಬಳಿ ನಡೆದಿದೆ.ದೇವರಾಜ (20) ಹಾಗೂ ಆಂಜನೇಯ (18) ಮೃತ ದುರ್ದೈವಿಗಳು. ಇನ್ನೋರ್ವ ಯುವಕ ನಾಗರಾಜ್‍ಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ರೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ದೇವದುರ್ಗ ತಾಲೂಕಿನ ಅಡಕಲಗುಡ್ಡ ಗ್ರಾಮದವರು. ಸ್ವಗ್ರಾಮಕ್ಕೆ ಮರಳುವಾಗ ರಸ್ತೆ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ಅಪಘಾತವಾಗಿದೆ.ಘಟನೆ ಹಿನ್ನೆಲೆ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 Advertisement 







 Advertisement 




Sign in to your account
Username or Email Address


Password

 Remember Me


