ರಾಯಚೂರು: ಸಿರವಾರದಲ್ಲಿ ವ್ಯಾಪಾರಿಯೊಬ್ಬರಿಗೆ 10 ಲಕ್ಷ ರೂ ನೀಡದಿದ್ದರೆ ಬಾಂಬ್ ಸ್ಫೋಟಗೊಳಿಸುವುದಾಗಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ದೇವದುರ್ಗ ತಾಲೂಕಿನ ನಾಗಡದಿನ್ನಿಯ ರಾಜಶೇಖರ್ ಬಂಧಿತ ಆರೋಪಿ. ಸಿರವಾರ ಪಟ್ಟಣದ ಅಮರೇಶಪ್ಪ ಅಚ್ಚಾ ಎಂಬವರಿಗೆ 10 ಲಕ್ಷ ರೂಪಾಯಿ ನೀಡದಿದ್ದರೆ ಪೆಟ್ರೋಲ್ ಬಾಂಬ್ ಹಾಕುವುದಾಗಿ ಆರೋಪಿ ಬೆದರಿಕೆಯೊಡ್ಡಿದ್ದನು. ಅಲ್ಲದೆ ಫೆಬ್ರವರಿ 23ರ ಮಧ್ಯರಾತ್ರಿ ಪಟ್ಟಣದ ದೇವದುರ್ಗ ಕ್ರಾಸ್ ಬಳಿ ಇರುವ ಅಮರೇಶಪ್ಪನ ಮನೆ ಮುಂದೆ ಪಟಾಕಿ ಸಿಡಿಸಿ ಇದು ಸಣ್ಣ ಬಾಂಬ್ ಮುಂದೆ ದೊಡ್ಡ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಕರೆ ಮಾಡಿದ್ದಾನೆ.ಈ ಕುರಿತಂತೆ ಅಮರೇಶಪ್ಪ ಅಚ್ಚಾ ಮೊಬೈಲ್‍ನಲ್ಲಿ ಮೆಸೇಜ್ ಮಾಡಿ ಹತ್ತು ಲಕ್ಷ ರೂ.ಗೆ ನೀಡುವಂತೆ ಆರೋಪಿ ಬೆದರಿಕೆ ಹಾಕಿದ್ದು, ಮೊಬೈಲ್ ಆಪ್‍ವೊಂದನ್ನು ಬಳಸಿ ತನ್ನ ಗುರುತು ಸಿಗದಿರುವಂತೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.ತನಿಖೆ ವೇಳ ಅಮರೇಶಪ್ಪನ ಅಂಗಡಿಗೆ ಆಗಾಗ ಬರುತ್ತಿದ್ದ ರಾಜಶೇಖರನನ್ನು ಅನುಮಾನದ ಮೇಲೆ ಪೊಲೀಸರು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ.Sign in to your account
Username or Email Address


Password

 Remember Me


