ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ ಅಭಿಮಾನಿಗಳ ಬಳಗಕ್ಕೆ ಏನೋ ಒಂದು ಖುಷಿ. ಒಂದನೇ ಕ್ಲಾಸ್ ಹುಡುಗನಿಂದ 60ರ ಅಜ್ಜನಿಗೂ ದರ್ಶನ್ ಅಚ್ಚುಮೆಚ್ಚು. ವಿಭಿನ್ನ ಸಿನಿಮಾಗಳ ಮೂಲಕ ಎಲ್ಲ ವರ್ಗಕ್ಕೂ ಯಜಮಾನ ಅಚ್ಚುಮೆಚ್ಚು. ಇನ್ನೂ ಒಡೆಯನ ಸಿನ್ಮಾ ಬಂದ್ರೆ ಸಾಕು ಡಿ ಬಾಸ್ ಹುಡುಗರಿಗೆ ಜಾತ್ರೆ ಬಂದಂಗೆ. ಸಿನಿಮಾ ಬಿಡುಗಡೆಗೂ ಮುನ್ನವೇ ಥಿಯೇಟರ್ ಮುಂದೆ ಸಾರಥಿಯ ಕಟೌಟ್ ನಿಲ್ಲಿಸಿ, ಹಲಗೆ ಬೀಟ್‍ಗೆ ಎರಡು ಟಪ್ಪಾಂಗುಚ್ಚಿ ಹಾಕೇ ಬಿಡ್ತಾರೆ. ಇದೀಗ ಜಗ್ಗುದಾದಾ ಹಿರಿಯ ಅಭಿಮಾನಿಯನ್ನ ಭೇಟಿಯಾಗಿ ಮನೆಯ ಮಗನಂತೆ ಸರಳವಾಗಿ ಮಾತನಾಡಿರೋ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸುಂಟರಗಾಳಿ ಎಬ್ಬಿಸಿದೆ.ಡಿ ಬಾಸ್ ಹುಡುಗರು ಸಹ ವೀಡಿಯೋ ಶೇರ್ ಮಾಡಿಕೊಂಡು ದಾಸನ ಸರಳತೆ ಗುಣಗಾನ ಮತ್ತು ಚಿತ್ರರಂಗದ ಬಗ್ಗೆ ದತ್ತನಿಗಿರುವ ಕಾಳಜಿಯನ್ನ ಹಾಡಿ ಹೊಗಳುತ್ತಿದ್ದಾರೆ. ದರ್ಶನ್ ಫಾರ್ಮ್ ಹೌಸ್‍ಗೆ ಬಂದ ವೃದ್ಧೆ ತನ್ನ ಬಹುದಿನಗಳ ಕನಸು ಈಡೇರಿಸಿಕೊಂಡರು. ಈ ವೇಳೆ ಮಾತನಾಡಿದ ಬಳಿಕ ಮಹಿಳೆಯನ್ನ ಮನೆಗೆ ತಲುಪಿಸುವಂತೆ ತಮ್ಮ ಹುಡುಗರಿಗೆ ಹೇಳಿದರು.ಅಜ್ಜಿ ಬಳಿ ದಾಸನ ಮನವಿ: ದರ್ಶನ್ ಕಾಣುತ್ತಲೇ ಖುಷಿಯಾದ ಅಜ್ಜಿ, ನಾನು ನಿನ್ನ ಸಿನಿಮಾಗಳನ್ನೇ ನೋಡ್ತೀನಿ ಅಪ್ಪ. ಬೇರೆ ಚಿತ್ರಗಳನ್ನ ನೋಡಲು ಹೋಗಲ್ಲ ಅಂದ್ರು. ಇನ್ನೊಂದು ನೂರೈವತ್ತು ರೂಪಾಯಿ ಕೊಟ್ರೆ ನಮ್ಮಂತವರು ಇನ್ನು ಹಲವರು ಬದುಕುತ್ತಾರೆ ಅಂತ ಹೇಳುವ ಮೂಲಕ ಚಂದನವನದ ಕಾಳಜಿಯನ್ನ ವ್ಯಕ್ತಪಡಿಸಿದರು. ದರ್ಶನ್ ನನ್ನು ಕಣ್ತುಂಬಿಕೊಂಡು ಅಜ್ಜಿ ಫೋನ್ ನಂಬರ್ ನೀಡುವಂತೆ ಕೇಳಿಕೊಂಡರು.ನೀವು ನೋಡಬೇಕೆಂದಾಗ ರವಿಯನ್ನ ಭೇಟಿಯಾಗಿ. ಆತ ನಿಮ್ಮನ್ನು ಇಲ್ಲಿಗೆ ಕರೆದುಕೊಂಡು ಬರುತ್ತಾನೆ. ನನ್ನ ಜೀವ ಇರೋವರೆಗೂ ದರ್ಶನ್ ಅಣ್ಣನನ್ನು ತೋರಿಸಿ ಅಂತ ಹೇಳಿದರು.ಡಿ ಬಾಸ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ ಭಾನುವಾರ ಹುಬ್ಬಳ್ಳಿಯಲ್ಲಿ ನಡೆಯಿತು. ಲಕ್ಷಾಂತರ ಅಭಿಮಾನಿಗಳು ಡಿ ಬಾಸ್ ದರ್ಶನ ಪಡೆದ್ರು. ನಗರದ ರೈಲ್ವೆ ಮೈದಾನದಲ್ಲಿ ನಡೆದ ರಾಬರ್ಟ್’ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಲಕ್ಷದಷ್ಟು ಅಭಿಮಾನಿಗಳು ಜಮಾಯಿಸಿದ್ರು. ದರ್ಶನ್ ಆಗಮಿಸುತ್ತಿದ್ದಂತೆ ಅಭಿಮಾನಿಗಳ ಶಿಳ್ಳೆ, ಕೇಕೆ ಮುಗಿಲುಮುಟ್ಟಿತ್ತು. ಸಮಾರಂಭದಲ್ಲಿ ನಾಯಕಿ ನಟಿ ಆಶಾ ಭಟ್, ದೇವರಾಜ್, ಅಭಿಷೇಕ್ ಅಂಬರೀಶ್, ಚಿಕ್ಕಣ್ಣ, ರವಿಶಂಕರ್, ವಿನೋದ್ ಪ್ರಭಾಕರ್, ತರುಣ್ ಸುಧೀರ್ ಸೇರಿದಂತೆ ಇಡೀ ಚಿತ್ರ ತಂಡ ಭಾಗವಹಿಸಿತ್ತು.Sign in to your account
Username or Email Address


Password

 Remember Me


