ಬೆಂಗಳೂರು: ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ನಿವೃತ್ತ ಐಎಎಸ್ ಅಧಿಕಾರಿ ಮದನಗೋಪಾಲ್ ಇಂದು ಅಧಿಕಾರ ಸ್ವೀಕರಿಸಿದ್ದಾರೆ.ಈ ಹುದ್ದೆಯನ್ನು ಅಲಂಕರಿಸಿದರೂ ಯಾವುದೇ ವೇತನ , ಭತ್ಯೆ ಪಡೆಯುವುದಿಲ್ಲ ಮದನಗೋಪಾಲ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.ಪತ್ರದಲ್ಲಿ ಈ ಹುದ್ದೆಗೆ ಸಂಬಂಧಿಸಿದಂತೆ ನಾನು ಯಾವುದೇ ವೇತನ, ಇತರೇ ಭತ್ಯೆಗಳನ್ನು ಪಡೆಯಲು ಇಚ್ಛಿಸುವುದಿಲ್ಲ. ಸರ್ಕಾರದಿಂದ ಗೌರವ ಧನವಾಗಿ ಒಂದು ರೂಪಾಯಿಯನ್ನು ಮಾತ್ರ ಪಡೆಯಲು ಇಚ್ಛಿಸಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆSign in to your account
Username or Email Address


Password

 Remember Me


