ಚಿಕ್ಕಮಗಳೂರು: ನಗರದ ರೈಲ್ವೇ ನಿಲ್ದಾಣದ ಬಳಿ ಸ್ವಿಫ್ಟ್ ಕಾರಿನಲ್ಲಿ ಹುಲಿಯ ಉಗುರು, ಹಲ್ಲು ಹಾಗು ಮೂಳೆಗಳನ್ನ ಮಾರಲು ಯತ್ನಿಸುತ್ತಿದ್ದ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನ ಹಾಸನ ಜಿಲ್ಲೆ ಅಂಬುಗ ಗ್ರಾಮದ ಲೋಕೇಶ್ ಹಾಗೂ ಚಿಕ್ಕಮಗಳೂರು ತಾಲೂಕಿನ ಅರಿಶಿನಗುಪ್ಪೆ ಗ್ರಾಮದ ಸಾಗರ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಸುಮಾರು 10 ಲಕ್ಷ ಮೌಲ್ಯದ ಎಂಟು ಹುಲಿ ಉಗುರು, ಒಂದು ಹುಲಿ ಚರ್ಮ, ಒಂದು ದೊಡ್ಡ ಕೋರೆ ಹಲ್ಲು ಹಾಗೂ ಹದಿನಾಲ್ಕು ಹಲ್ಲಿನ ಮೂಳೆಗಳನ್ನ ವಶಪಡಿಸಿಕೊಂಡಿದ್ದಾರೆ. ಬಂಧಿತರು ಹಾಗೂ ಬಂಧಿತರಿಂದ ವಶಪಡಿಕೊಂಡ ವಸ್ತುಗಳನ್ನ ಚಿಕ್ಕಮಗಳೂರು ವಲಯ ಅರಣ್ಯಾಧಿಕಾರಿಗಳ ವಶಕ್ಕೆ ನೀಡಿದ್ದಾರೆ.ಬಂಧಿತರನ್ನ ವಿಚಾರಣೆಗೆ ಒಳಪಡಿಸಿರೋ ಅಧಿಕಾರಿಗಳು ಈ ದಂಧೆಯಲ್ಲಿ ಇವರಿಬ್ಬರೇ ಇದ್ದಾರೋ ಅಥವಾ ಇದೊಂದು ತಂಡವೋ ಎಂದು ಮಾಹಿತಿ ಕಲೆ ಹಾಕುತ್ತಿದ್ದಾರೆ. ಯಾಕೆಂದರೆ ಇದು ಒಬ್ಬಿಬ್ಬರ ಕೈನಲ್ಲಿ ಆಗುವ ಕೆಲಸವಲ್ಲ ಎಂಬ ಅನುಮಾನ ಪೊಲೀಸರದ್ದು. ಹುಲಿಯ ಹಲ್ಲು, ಉಗುರು, ಚರ್ಮವನ್ನ ಎಲ್ಲಿಂದ ತಂದಿದ್ದಾರೆ. ಇವರೇ ಹುಲಿಯನ್ನ ಕೊಂದಿದ್ದಾರಾ ಅಥವ ಬೇರೆಯವರು ಕೊಂದು ಇವರಿಗೆ ಈ ವಸ್ತುಗಳನ್ನ ಕೊಟ್ಟಿದ್ದಾರಾ ಎಂಬ ಎಲ್ಲಾ ರೀತಿಯ ತನಿಖೆ ಕೈಗೊಂಡಿದ್ದಾರೆ.ಹುಲಿ ಸೇರಿದಂತೆ ಕಾಡುಪ್ರಾಣಿಗಳ ಮೂಳೆಗಳಿಗೆ ವಿದೇಶದಲ್ಲಿ ಭಾರೀ ಬೇಡಿಕೆ ಇದೆ. ಹುಲಿ, ಜಿಂಕೆ ಸೇರಿದಂತೆ ಕಾಡುಪ್ರಾಣಿಗಳ ಮೂಳೆಗಳಿಗೆ ವಿದೇಶದಲ್ಲಿ ಭಾರೀ ಬೇಡಿಕೆ ಇದೆ. ಸೌಂದರ್ಯವರ್ಧಕ, ಇಂಟಿರಿಯಲ್ ಡಿಸೈನ್‍ಗಳಿಗೂ ಇವುಗಳನ್ನ ಬಳಸುತ್ತಾರೆ. ಅದಕ್ಕಿಂತ ಮಿಗಿಲಾಗಿ ಲೈಂಗಿಕ ಶಕ್ತಿ ವೃದ್ಧಿಯಾಗಲು ಬಳಸುವ ಔಷಧಿಗಳಿಗೂ ಕಾಡುಪ್ರಾಣಿಗಳ ಮೂಳೆಗಳನ್ನ ಬಳಸುವುದರಿಂದ ಮಲೆನಾಡಲ್ಲಿ ಕಾಡುಪ್ರಾಣಿಗಳ ಭೇಟಿ ತಂಡ ಸಕ್ರಿಯವಾಗಿದ್ಯಾ ಎಂಬ ಅನುಮಾನ ಪೊಲೀಸ್ ಹಾಗೂ ಅರಣ್ಯ ಅಧಿಕಾರಿಗಳದ್ದು. ಹಾಗಾಗಿ ಇಷ್ಟು ದೊಡ್ಡ ಪ್ರಮಾಣದ ಹುಲಿಯ ವಸ್ತುಗಳನ್ನ ತಂದು ಮಾರಾಟ ಮಾಡಲು ಯತ್ನಿಸುತ್ತಿರುವ ಇವರನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.Sign in to your account
Username or Email Address


Password

 Remember Me


