ಹುಬ್ಬಳ್ಳಿ: ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಕಳೆದ ರಾತ್ರಿ ‘ರಾಬರ್ಟ್’ ಅಬ್ಬರಿಸಿದ್ದಾನೆ.ಹೌದು. ಡಿ ಬಾಸ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡೆಯಿತು. ಲಕ್ಷಾಂತರ ಅಭಿಮಾನಿಗಳು ಡಿ ಬಾಸ್ ದರ್ಶನ ಪಡೆದ್ರು. ನಗರದ ರೈಲ್ವೆ ಮೈದಾನದಲ್ಲಿ ನಡೆದ ರಾಬರ್ಟ್’ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಲಕ್ಷದಷ್ಟು ಅಭಿಮಾನಿಗಳು ಜಮಾಯಿಸಿದ್ರು.ದರ್ಶನ್ ಆಗಮಿಸುತ್ತಿದ್ದಂತೆ ಅಭಿಮಾನಿಗಳ ಶಿಳ್ಳೆ, ಕೇಕೆ ಮುಗಿಲುಮುಟ್ಟಿತ್ತು. ಸಮಾರಂಭದಲ್ಲಿ ನಾಯಕಿ ನಟಿ ಆಶಾ ಭಟ್, ದೇವರಾಜ್, ಅಭಿಷೇಕ್ ಅಂಬರೀಶ್, ಚಿಕ್ಕಣ್ಣ, ರವಿಶಂಕರ್, ವಿನೋದ್ ಪ್ರಭಾಕರ್, ತರುಣ್ ಸುಧೀರ್ ಸೇರಿದಂತೆ ಇಡೀ ಚಿತ್ರ ತಂಡ ಭಾಗವಹಿಸಿತ್ತು.ಈ ವೇಳೆ ದರ್ಶನ್ ಡೈಲಾಗ್ ಹೊಡೆದ್ರು. ತಮ್ಮ ನೆನಪುಗಳನ್ನ ಹಚ್ಚಿಕೊಂಡರು. ಹಾಡು-ಡ್ಯಾನ್ಸ್‍ನಿಂದ ವೇದಿಕೆ ರಂಗೇರಿತ್ತು. ಸಮಾರಂಭದಲ್ಲಿ ಸಚಿವರಾದ ಜಗದೀಶ್ ಶೆಟ್ಟರ್, ಬಿ.ಸಿ.ಪಾಟೀಲ್ ಕೂಡ ಭಾಗವಹಿಸಿದ್ರು.Sign in to your account
Username or Email Address


Password

 Remember Me


