ಬೆಂಗಳೂರು: ಫೇಸ್‍ಬುಕ್ ಲೈವ್ ವೀಡಿಯೋ ಅಪ್ಲೋಡ್ ಮಾಡಿ ತನ್ನ ಸಾವಿಗೆ ನ್ಯಾಯ ಕೊಡಿಸಿ ಎಂದು ಯುವಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಮಂಜುನಾಥ್ ಮೃತ ಯುವಕ. 11 ಲಕ್ಷ ಹಣ ಪಡೆದ ಸ್ನೇಹಿತ ಪವನ್.ಬಿ ವಾಪಸ್ ನೀಡಿದೆ ಹಿಂಸೆ ಮಾಡುತ್ತಿದ್ದಾನೆ. ಹಣ ವಾಪಸ್ ಕೇಳಿದರೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ವೀಡಿಯೋ ಮಾಡಿನೇಣಿಗೆ ಶರಣಾಗಿದ್ದಾನೆ.ಪವನ್. ಬಿ ನನ್ನ ಬಳಿ 11 ಲಕ್ಷ ಹಣ ಪಡೆದಿದ್ದಾನೆ. ನನ್ನ ಹೆಸರಲ್ಲಿ ಅಗ್ರಿಮೆಂಟ್ ಮಾಡಿಕೊಂಡು ಚೆಕ್ ಪಡೆದು ನನ್ನನ್ನು ಯಾಮಾರಿಸಿ ಹಣವನ್ನು ಪಡೆದಿದ್ದಾನೆ. ವಾಪಸ್ ನೀಡದೇ ಹಿಂಸೆ ಮಾಡುತ್ತಿದ್ದಾರೆ. ಕಳೆದ 6 ತಿಂಗಳಿನಿಂದ 11 ಲಕ್ಷ ಪಡೆದಿರೋ ಪವನ್ ಬಳಿ ಹಣ ವಾಪಸ್ ಕೇಳಿದ್ರೇ ಜೀವ ಬೆದರಿಕೆ ಹಾಕುತ್ತಿದ್ದಾನೆ. ನನ್ನ ಹಣದಲ್ಲಿ ಕಾರು, ಮೊಬೈಲ್ ತಗೊಂಡಿದ್ದಾರೆ. ನನ್ನ ಹಣವನ್ನು ವಾಪಾಸ್ ಕೇಳಿದರೆ ಹುಡುಗರನ್ನು ಕಳುಹಿಸಿ ಜೀವದೆಕರಿಕೆ ಹಾಕುತ್ತಿದ್ದಾರೆ. ಪವನ್.ಬಿ ನನ್ನ ಸಾವಿಗೆ ಕಾರಣ ಎಂದು ವೀಡಿಯೋ ಮಾಡಿ ಯುವಕ ನೇಣಿಗೆ ಶರಣಾಗಿದ್ದಾನೆ.ಸದ್ಯ ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಯಲ್ಲಿ ಇಡಲಾಗಿದೆ. ಈ ಪ್ರಕರಣ ಬಾಗಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.






 Advertisement 




Sign in to your account
Username or Email Address


Password

 Remember Me


