ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದಾರಾಮಯ್ಯ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದೆ. ಈಗ ಕಾಂಗ್ರೆಸ್ ಒಳ ರಾಜಕಾರಣಕ್ಕೆ ಸಂಬಂಧಿಸಿದ ಸ್ಫೋಟಕ ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಆಡಿಯೋದಲ್ಲಿ ಒಂದೇ ಪಾನ್‍ಗೆ ಮೂವರು ನಾಯಕರಿಗೆ ಡಿ.ಕೆ.ಶಿವಕುಮಾರ್ ಶಾಕ್ ನೀಡಿದ್ರಾ ಅನ್ನೋ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.ಮಾಜಿ ಶಾಸಕ ಪ್ರಸನ್ ಕುಮಾರ್ ಕಾರ್ಯಕರ್ತರೊಬ್ಬರ ಜೊತೆಗಿನ ಸಂಭಾಷಣೆಗೆ ಆಡಿಯೋ ಕ್ಲಿಪ್ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಆಡಿಯೋದಲ್ಲಿ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯನವರ ಸೋಲು, ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮತ್ತು ಜಮೀರ್ ಅಹ್ಮದ ವಿಚಾರವಾಗಿ ಮಾತನಾಡಲಾಗಿದೆ.ಆಡಿಯೋದಲ್ಲಿ ಏನಿದೆ?:
ಪ್ರಸನ್ನ ಕುಮಾರ್ : ಮೊದಲು ವಿಠಲ ದಯಾನಂದ್ ಅಶೋಕ್ ಬೇಕಾಗಿತ್ತು.. ಈಗ್ಯಾಕೆ ನಮ್ಮ ಹತ್ತಿರ ಬಂದ..?
ಕಾರ್ಯಕರ್ತ : ಹುಂ
ಪ್ರಸನ್ನ ಕುಮಾರ್: ಶಿಸ್ತಿನ ಸಮಿತಿ ಇದೆ. ಅಲ್ಲಿ ಕೊಡ್ತೀನಿ ನೀನು ಕೊಟ್ಟಿರೋ ಕಂಪ್ಲೆಂಟ್.. ಅವರು ಏನು ತೀರ್ಮಾನ ಮಾಡ್ತಾರೋ ಮಾಡಲಿ ಅಂತ ಹೇಳಿ ಕಳುಹಿಸಿದ್ದಾನಂತೆ.
ಕಾರ್ಯಕರ್ತ: ಹುಂ…
ಪ್ರಸನ್ನ ಕುಮಾರ್ : ನಾನು ಹೇಳಿದೆ ಅವನಿಗೆ.. ಯಾರು ಇಲ್ಲಾ ನಾನೇ ಅಂತ ತಿಳಿದುಕೊಂಡಿದ್ದಾನೆ ಪುಲಿಕೇಶಿ ನಗರದಲ್ಲಿ. ಮೊದಲು ನೀನು ನನ್ನ ಪಾರ್ಟಿಗೆ ಸೇರಿಸಿಕೊಳ್ಳಿ ಅವನ ಮಾತೆಲ್ಲಾ ಕಡಿಮೆ ಆಗ್ತದೆ ಅಂದೆ.ಕಾರ್ಯಕರ್ತ : ಹುಂ..
ಪ್ರಸನ್ನ ಕುಮಾರ್ : ನಡಿ ಕಾಂಗ್ರೆಸ್ ಆಫೀಸಿಗೆ.. ನಡಿ.. ಸಲೀಂ ಬರ್ತಾನೆ ಮಾತಾಡೋಣ.. ಅಲ್ಲೇ ಡಿಸೈಡ್ ಮಾಡ್ತೀನಿ ಅಂತ.
ಕಾರ್ಯಕರ್ತ: ಹುಂ..
ಪ್ರಸನ್ನ ಕುಮಾರ್ : ಪಾರ್ಟಿ ಆಫೀಸ್‍ಗೆ ಹೋದ್ವಿ.. ಅಲ್ಲಿ ಯಾರೋ ಹಾಸನ ಡಿಸ್ಟ್ರಿಕ್‍ನವರು ಬಂದಿದ್ದರು. ಸುಮಾರು ಹೊತ್ತು ಅಲ್ಲೇ ಆಗ್ಬಿಡ್ತು. ನಾನ್ ಬೇರೆ ಟಿಫನ್ ಮಾಡಿಕೊಂಡು ಹೋಗಿರ್ಲಿಲ್ಲ ಸ್ವಲ್ಪ ಗಂಜಿ ಕುಡ್ಕೊಂಡು ಹೋಗಿದ್ದೆ. ಹಂಗೆ ಹಿಂಗೆ ಮಾಡಿ ಎರಡುವರೆ ಮೂರು ಗಂಟೆ ಅಲ್ಲೆ ಆಯ್ತು. ಸಲೀಂ ಕರೆಸಿ.. ನೋಡಿ ಇವನದು ಡೇಟ್ ಫಿಕ್ಸ್ ಮಾಡಿಬಿಡಿ ಅಂತ ಹೇಳಿದರು. ಆಮೇಲೆ ಇನ್ನು ಒಂದು ಸ್ವಲ್ಪ ಹೊತ್ತು ಯಾರೋ ಬಂದ್ರು ಅಂತ ಹೋದರು. ಫೈನಲ್ ಆಗಿ ಒಳಗೆ ಹೋದ್ವಿ .. ಆ್ಯಂಟಿ ಚೇಂಬರ್‍ನಲ್ಲಿ ಶರತ್ ಬಚ್ಚೇಗೌಡ, ಮಧು ಬಂಗಾರಪ್ಪ ಜೊತೆಗೆ ನಿಂದು ಸೇರಿಸಿಕೊಳ್ಳೋಣ.. ಸೇರಿಸೋದಾದರೆ ಪ್ರೆಸ್‍ಮೀಟ್ ಮಾಡಿ ಸೇರಿಸಿಕೊಳ್ಳಬೇಕು. ಹಂಗೇನಾದರು ಇದ್ದರೆ ಈಗಲೇ ಸೇರಿಸಿಕೊಳ್ತೀನಿ.. ಅದು ಸರಿ ಹೋಗೋದಿಲ್ಲ. ಪ್ರೆಸ್‍ಮೀಟ್ ಮಾಡಿ ಸೇರಿಸಿಕೊಳ್ಳಬೇಕು ಅಂತ ಅವರು ಹೇಳಿ ಕಳುಹಿಸಿದರು.ಕಾರ್ಯಕರ್ತ: ಈಗ ಸೇರಿಸಿಕೊಂಡ ಮೇಲೆ ಟಿಕೆಟ್ ಕೊಡಬೇಕಲ್ಲ..?
ಪ್ರಸನ್ನ ಕುಮಾರ್ : ಯಾರು…?
ಕಾರ್ಯಕರ್ತ: ನಿಮಗೆ ಟಿಕೆಟ್ ಸಿಗಬೇಕಲ್ಲ ಸೇರಿಸಿದ ಮೇಲೆ
ಪ್ರಸನ್ನ ಕುಮಾರ್ : ಅದು ಆಮೇಲೆ ನೋಡಿಕೊಳ್ಳೋಣ.. ಮೊದಲು ಇನ್ನ ಬಾಳ ದಿಸ ಐತೆ. ಈಗಲೇ ಟಿಕೆಟ್-ಗಿಕೆಟ್ ಅಂತಲ್ಲ ಅದು ಮುಂದಕ್ಕೆ ನೋಡೋಣ.
ಕಾರ್ಯಕರ್ತ : ಅದೇ ಅದೇ ಮೊದಲು ಎಂಟ್ರಿ.
ಪ್ರಸನ್ನ ಕುಮಾರ್ : ಅಲ್ಲಿ ಅಲ್ಲಿ ನಾನೊಬ್ಬನೆ ಅನ್ನೋತರ ಇರಬಾರದು ಅವರ ತಲೆಯಲ್ಲಿ.
ಕಾರ್ಯಕರ್ತ : ಅದು ಕರೆಕ್ಟೇ
ಪ್ರಸನ್ನ ಕುಮಾರ್: ಟಿಕೆಟ್ ಅಂತು 200% ಅವನಿಗೆ ಕೊಡೋದಿಲ್ಲ.ಪ್ರಸನ್ನ ಕುಮಾರ್ : ಚಾಮುಂಡೇಶ್ವರಿ ಎಲ್ಲೋ ಒಂದು ಬೋವಿ ಜನಾಂಗದ್ದು ಕಾನ್ಫರೆನ್ಸ್ ಇತ್ತಂತೆ. ಏಯ್ ನಾನು ಬಸವಲಿಂಗಪ್ಪನ ಮಗನಿಗೆ ಕೊಡದೆ ನಿಮ್ಮವರಿಗೆ ಕೊಟ್ಟಿದೀನಿ ಅಂದ್ರಂತೆ ಅದು ಅಲ್ಲಿ ವೈಲ್ಡ್ ಸ್ಪ್ರೆಡ್ ಆಯ್ತು.
ಕಾರ್ಯಕರ್ತ : ಹೌದು ಹೇಳಿ
ಪ್ರಸನ್ನ ಕುಮಾರ್ : ಮೈಸೂರು ಆ ಕಡೆ ಎಲ್ಲಾ ಶಡ್ಯೂಲ್ ಕಾಸ್ಟ್ ನಮ್ಮವರೆಲ್ಲಾ ಜಾಸ್ತಿ ಇದಾರೆ ಅಲ್ಲಿ
ಕಾರ್ಯಕರ್ತ : ಅವರೆಲ್ಲಾ ಉಲ್ಟಾ ವೋಟ್ ಹಾಕಿದರು.
ಪ್ರಸನ್ನ ಕುಮಾರ್ : ಎಲ್ಲಾ ಉಲ್ಟಾ ಹಾಕಿದರುSign in to your account
Username or Email Address


Password

 Remember Me


