ಹಾವೇರಿ: ನಾಪತ್ತೆಯಾಗಿರುವ ಪತ್ನಿ ಮತ್ತು ಮಗುವಿಗಾಗಿ ಪತಿ ಹುಡುಕಾಟ ನಡೆಸುತ್ತಿರುವ ಘಟನೆ ಹಾವೇರಿಯ ರಾಣೇಬೆನ್ನೂರಿನಲ್ಲಿ ನಡೆದಿದೆ.ರಾಣೇಬೆನ್ನೂರು ನಿವಾಸಿ ಅಮಜದ್ ಖಾನ್ ಮೂರು ವರ್ಷಗಳ ಪ್ರೀತಿಸಿದ ರಟ್ಟಿಹಳ್ಳಿ ಪಟ್ಟಣದ ಬೀಬಿ ಫಾತಿಮಾ ಉರ್ಫ್ ನಗ್ಮಾರನ್ನ ಪ್ರೀತಿಸಿ ಮದುವೆಯಾಗಿದ್ದರು. ಮದುವೆ ಬಳಿಕ ದಂಪತಿ ರಾಣೇಬೆನ್ನೂರಿನಲ್ಲಿ ವಾಸವಾಗಿದ್ದರು. ವರ್ಷದ ಹಿಂದೆ ಹೆರಿಗೆಗೆ ಅಂತ ನಗ್ಮಾ ತವರು ಸೇರಿದ್ದರು. ದಂಪತಿಗೆ ಮುದ್ದಾದ ಹೆಣ್ಣು ಮಗು ಸಹ ಇದೆ. ಜನವರಿ 22ರಂದು ಪತಿಯ ಬಳಿ ಹೋಗಿ ಬರೋದಾಗಿ ನಗ್ಮಾ ಮಗು ಜೊತೆ ರಟ್ಟಿಹಳ್ಳಿಯಿಂದ ಬಸ್ ಹತ್ತಿದ್ದರು. ಇತ್ತ ಮಗಳು ರಾಣೇಬೆನ್ನೂರಿನತ್ತ ಪ್ರಯಾಣ ಬೆಳೆಸಿರುವ ವಿಷಯವನ್ನ ಅಳಿಯ ಅಮಜದ್‍ಗೆ ನಗ್ಮಾ ಪೋಷಕರು ತಿಳಿಸಿದ್ದರು.ಇತ್ತ ಮಗಳು ಮತ್ತು ಪತ್ನಿಯನ್ನ ಕರೆದುಕೊಂಡು ಹೋಗಲು ಅಮಜದ್ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಆದ್ರೆ ಪತ್ನಿ ಮಾತ್ರ ಸಂಜೆಯಾದ್ರೂ ಬಾರದಿದ್ದಾಗ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸಂಬಂಧಿಕರ ಊರುಗಳಿಗೆ ಫೋನ್ ಮಾಡಿ ವಿಚಾರಿಸಿದದ್ರೂ ಪತ್ನಿ ಸಿಗದಿದ್ದಾಗ ಜನವರಿ 29ರಂದು ಅಮಜದ್ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ತನಿಖೆ ನಡೆಸುತ್ತಿದ್ದಾರೆ.Sign in to your account
Username or Email Address


Password

 Remember Me


