ದಾವಣಗೆರೆ: ಅಂತರ್ಜಾತಿ ಯುವಕ-ಯುವತಿ ಪ್ರೀತಿಸಿ, ಮನೆಗಳಲ್ಲಿ ವಿರೋಧವಿದ್ದ ಕಾರಣ ಊರು ಬಿಟ್ಟು ಹೋಗಿದ್ದರು. ಯುವತಿಯ ಕಡೆಯವರು ಯುವಕನ ಕುಟುಂಬಸ್ಥರ ಹಾಗೂ ಸಂಬಂಧಿಕರ ಮೇಲೆ ಹಲ್ಲೆ ನಡೆಸಿ, 5 ಮನೆ ಧ್ವಂಸ ಮಾಡಿದ ಪ್ರಕರಣ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಕನ್ನನಾಯಕನಹಳ್ಳಿಯಲ್ಲಿ (ಅಗ್ರಹಾರ) ನಡೆದಿದೆ.ಒಂದೇ ಗ್ರಾಮದ ದುರಗೇಶ್, ಕವಿತಾ ಕಳೆದ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರದ್ದು ಜಾತಿ ಬೇರೆಯಾಗಿದ್ದಂದ ಮದುವೆಗೆ ಎರಡೂ ಕುಟುಂಬಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ಹಾಗಾಗಿ ದುರಗೇಶ್ ಮತ್ತು ಕವಿತಾ ದೇವಸ್ಥಾನದಲ್ಲಿ ಮದುವೆಯಾಗಿ ಊರು ಬಿಟ್ಟಿದ್ದಾರೆ.ದುರುಗೇಶ್ ಮತ್ತು ಸಂಬಂಧಿಕರ ಮನೆಯ ದಾಳಿ ನಡೆಸಿರುವ ಕವಿತಾ ಕುಟುಂಬಸ್ಥರು ಪೀಠೋಪಕರಣ, ಟಿವಿ, ಪಾತ್ರಗೆಳನ್ನ ಧ್ವಂಸ ಮಾಡಿದ್ದಾರೆ. ಮನೆಯ ಮುಂದೆ ನಿಲ್ಲಿಸಿದ್ದ ಎರಡು ಬೈಕ್ ಗಳನ್ನ ಸಹ ಜಖಂಗೊಳಿದ್ದಾರೆ. ದುರುಗೇಶ್ ಕುಟುಂಬ ಗ್ರಾಮಕ್ಕೆ ಬರದಂತೆ ಬೆದರಿಕೆ ಸಹ ಹಾಕಿದ್ದಾರೆ. ಘಟನೆ ಸಂಬಂಧ ದೂರು ದಾಖಲಿಸಿದ್ರೂ ಪೊಲೀಸರು ಯಾರನ್ನ ಬಂಧಿಸದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ದುರಗೇಶ್ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.Sign in to your account
Username or Email Address


Password

 Remember Me


