– ಮುಗಿಲುಮುಟ್ಟಿದ ಪೋಷಕರ ಆಕ್ರಂದನಚಿಕ್ಕಬಳ್ಳಾಪುರ: ಕಾಣೆಯಾಗಿದ್ದ ಮಗು ಪಕ್ಕದ ಮನೆಯ ಸಂಪಿನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಾಪಲ್ಲಿ ಗ್ರಾಮದಲ್ಲಿ ನಡೆದಿದೆ.ರುಚಿತಾ(2) ಮೃತ ಮಗು. ನರಸಿಂಹಮೂರ್ತಿ ರಾಧಿಕಾ ದಂಪತಿ ಮಗಳನ್ನು ಕಳೆದುಕೊಂಡು ಇದೀಗ ದುಃಖಿತರಾಗಿದ್ದಾರೆ. ಮಗು ಕಾಣೆಯಾಗಿದೆ ಎಂದು ದಂಪತಿ ತಿಳಿದಿದ್ದರು. ಆದರೆ ಇದೀಗ ಮಗುವಿನ ಮೃತದೇಹ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ನಿನ್ನೆ ಬೆಳಗ್ಗೆ 10 ಗಂಟೆಯಿಂದಲೇ ಮಗು ಕಾಣೆಯಾಗಿತ್ತು. ಪೋಷಕರು ಗ್ರಾಮದಲ್ಲೆಲ್ಲಾ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಇಂದು ಮಗು ನೆರೆಮನೆಯ ನ್ಯಾರಪ್ಪ ಎಂಬವರ ಸಂಪಿನಲ್ಲಿ ಶವವಾಗಿ ಪತ್ತೆಯಾಗಿದೆ.ಮಗು ಸಿಕ್ಕ ಸಂಪಿನಲ್ಲಿ ಮೊದಲು ನೋಡಿದಾಗ ಮಗು ಕಂಡಿಲ್ಲ. ಆದರೆ ಈಗ ನೋಡಿದರೆ ಮಗು ಶವ ಪತ್ತೆಯಾಗಿದೆ. ಸಂಪಿಗೆ ಬೃಹತ್ ಗಾತ್ರದ ಚಪ್ಪಡಿ ಕಲ್ಲು ಅಡ್ಡ ಇಡಲಾಗಿದೆ. ಅದನ್ನ ಮಗು ಎತ್ತಿ ಅದರೊಳಗೆ ಬೀಳಲು ಸಾಧ್ಯವೇ ಇಲ್ಲ ಎಂದು ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಮಗು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.






 Advertisement 




Sign in to your account
Username or Email Address


Password

 Remember Me


