ಬೆಂಗಳೂರು: ಸ್ಯಾಂಡಲ್‍ವುಡ್ ದಿವಂಗತ ನಟ ಚಿರಂಜೀವಿ ಸರ್ಜಾ ಅಭಿಮಾನಿಗಳು ಮೇಘನಾ ರಾಜ್ ಮುಖದಲ್ಲಿ ಮಂದಹಾಸ ಬೀರಿಸಲು ಹಲವು ರೀತಿಯ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಇದೀಗ ಅಭಿಮಾನಿಗಳು ಚಿರಂಜೀವಿ ಹಳೆಯ ಫೋಟೋವೊಂದನ್ನು ಶೇರ್ ಮಾಡುವುದರ ಮೂಲಕ ಮೇಘನಾರ ಗಮನ ಸೆಳೆದಿದ್ದಾರೆ.ವಿಶೇಷವೆಂದರೆ ಫೋಟೋದಲ್ಲಿ ಚಿರು ಹಳದಿ ಬಣ್ಣದ ಚೆಕ್ಸ್ ಶರ್ಟ್ ಧರಿಸಿದ್ದು, ಜ್ಯೂನಿಯರ್ ಚಿರು ಕೂಡ ಅದೇ ರೀತಿಯ ಚೆಕ್ಸ್ ಶರ್ಟ್ ಧರಿಸಿದ್ದಾರೆ. ಸದ್ಯ ಕೊಲಾಜ್ ಮಾಡಿರುವ ಈ ಫೋಟೋವನ್ನು ಮೇಘನಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯ ಸ್ಟೋರಿಯಾಗಿ ಶೇರ್ ಮಾಡಿಕೊಂಡಿದ್ದಾರೆ.ಇದೀಗ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಫೋಟೋ ಜೊತೆಗೆ ಮೇಘನಾ ಜ್ಯೂನಿಯರ್ ಚಿರುಗೆ ನಾಲ್ಕು ತಿಂಗಳು ತುಂಬಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ನಿದ್ದೆಯಿಲ್ಲದೆಯೇ ನನ್ನ ಮಗನಿಂದ ನಾಲ್ಕು ತಿಂಗಳು ಖುಷಿಯಿಂದ ತುಂಬಿದೆ ಎಂದು ಕ್ಯಾಪ್ಷನ್ ಕೂಡ ಹಾಕಿಕೊಂಡಿದ್ದಾರೆ.ಇತ್ತೀಚೆಗಷ್ಟೇ ಚಿರಂಜೀವಿ ಸರ್ಜಾ ಅಭಿನಯದ ರಾಜಮಾರ್ತಾಂಡ ಸಿನಿಮಾದ ಟ್ರೈಲರ್‍ನನ್ನು ಜ್ಯೂನಿಯರ್ ಚಿರು ಬಿಡುಗಡೆ ಮಾಡಿದ್ದು, ಸಿನಿಮಾಕ್ಕೆ ಚಿರು ಸಹೋದರ ಧ್ರುವ ಸರ್ಜಾ ವಾಯ್ಸ್ ಡಬ್ ಮಾಡಲಿದ್ದಾರೆ. ಕಳೆದ ವಾರ ರಾಜಮಾರ್ತಾಂಡ ಸಿನಿಮಾದ ಟ್ರೇಲರ್ ಸೊಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿತ್ತು.Sign in to your account
Username or Email Address


Password

 Remember Me


