ಚಾಮರಾಜನಗರ: ಪತಿಯ ಮೇಲೆ ನಡೆಸುತ್ತಿದ್ದ ಜಗಳ ಬಿಡಿಸಲು ಹೋದ ಮಹಿಳೆ ಹಲ್ಲೆಗೊಳಗಾಗಿ ಮಹಿಳೆಯೆ ಗರ್ಭಪಾತ ಆಗಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೋಕು ಉತ್ತಂಬಳ್ಳಿಯಲ್ಲಿ ನಡೆದಿದೆ.ಹಲ್ಲೆಗೊಳಗಾದ ಮಹಿಳೆಯನ್ನು ಮಾದೇವಿ ಎಂದು ಗುರುತಿಸಲಾಗಿದೆ. ಶುಕ್ರವಾರ ರಾತ್ರಿ ಮಹಿಳೆ ಗಂಡ ಸೋಮು ಎಂಬಾತನ ಮೇಲೆ ಮಾದೇಶ್ ಹಾಗೂ ಇತರ ಸ್ನೇಹಿತರು ಜಗಳ ಮಾಡಿದ್ದಾರೆ. ಈ ವೇಳೆ ಪತಿಯನ್ನು ಜಗಳದಿಂದ ಬಿಡಿಸಲು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಮಾದೇವಿ ಮುಂದಾಗಿದ್ದಾರೆ.ಜಗಳ ನಡೆಯುತ್ತಿದ್ದ ಸಮಯದಲ್ಲಿ ಮಾದೇವಿ ಅಡ್ಡ ಬಂದಿದ್ದಕ್ಕೆ ಕೋಪಗೊಂಡ ಮಾದೇಶ್ ಮಹಿಳೆ ಹೊಟ್ಟೆಗೆ ಕಾಲಿನಿಂದ ಜೋರಾಗಿ ಒದ್ದಿದ್ದಾನೆ. ಒದೆತದಿಂದ ಮಾದೇವಿ ಗಂಭೀರವಾಗಿ ಗಾಯಗೊಂಡಿದ್ದು, ಇದೀಗ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಸದ್ಯ ಘಟನೆ ಕುರಿತಂತೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಆರೋಪಿ ಮಾದೇಶ ಹಾಗು ಸ್ನೇಹಿತರಾದ ಶಿವಣ್ಣ, ಗೋವಿಂದ ಎಂಬಾವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.






 Advertisement 




Sign in to your account
Username or Email Address


Password

 Remember Me


