ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಪೊಲೀಸರು ಬಡವರಿಗೊಂದು ರೂಲ್ಸ್ ಶ್ರೀಮಂತರಿಗೊಂದು ರೂಲ್ಸ್ ಎಂಬಂತೆ ವರ್ತನೆ ಮಾಡುತ್ತಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್ ಅಣೆಕಟ್ಟೆಗೆ ನಿರ್ಬಂಧ ಹೇರಿದ್ದರು. ಇದೀಗ ಪೊಲೀಸರು ತಮ್ಮ ಜೀಪ್‍ನ್ನು ನೀಡಿ ಡ್ಯಾಂ ಮೇಲೆ ಯುವಕನೋರ್ವನಿಗೆ ಚಲಾಯಿಸಲು ಅವಕಾಶ ನೀಡಿದ್ದಾರೆ.ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿ ತನ್ನ ಜೀಪ್ ಯುವಕನಿಗೆ ನೀಡಿದ್ದರಿಂದ ಡ್ಯಾಂ ಮೇಲೆ ಓಡಿಸಿದ್ದಾನೆ. ಯುವಕ ಡ್ರೈವ್ ಮಾಡುವ ವೇಳೆ ಪೊಲೀಸ್ ಅಧಿಕಾರಿಯೇ ವೀಡಿಯೋ ಮಾಡಿದ್ದಾರೆ. ಯುವಕ ಈ ವಿಡಿಯೋಗೆ ಹೆಬ್ಬುಲಿ ಸಿನಿಮಾದ ಹಾಡು ಹಾಕಿ ವಾಟ್ಸಪ್‍ಗೆ ಹಾಕಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ಜನ ಸಾಮಾನ್ಯರು ಪೊಲೀಸರ ಈ ನಡೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಬಡವರಿಗೊಂದು ಶ್ರೀಮಂತರಿಗೊಂದು ನ್ಯಾಯ?
ಕೆಆರ್‍ಎಸ್ ಅಣೆಕಟ್ಟೆಯ ಭದ್ರತೆಯ ನೆಪದಲ್ಲಿ ಕೆಲವು ದಿನಳ ಹಿಂದೆ ಪೊಲೀಸ್ ಪೇದೆ ಹುಚ್ಚೇಗೌಡ, ಬೀದಿ ಬದಿ ವ್ಯಾಪಾರಿ ಮುದ್ದ ಎಂಬಾತನ ಮೇಲೆ ಹಲ್ಲೆ ನಡೆಸಿದ್ದರು. ಬೃಂದಾವನದ ದ್ವಾರದ ಬಳಿ ಮುದ್ದ ವ್ಯಾಪಾರ ಮಾಡುವ ವೇಳೆ ಇಲ್ಲಿ ವ್ಯಾಪಾರ ಮಾಡಿದ್ದರೆ ಭದ್ರತೆಗೆ ಲೋಪವಾಗುತ್ತದೆ ಎಂದು ಹಲ್ಲೆ ಮಾಡಲಾಗಿತ್ತು. ಇದೀಗ ಮುದ್ದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.Sign in to your account
Username or Email Address


Password

 Remember Me


