ಬೆಂಗಳೂರು: ಆಪ್ತ ಮಾಜಿ ಮೇಯರ್ ಸಂಪತ್ ರಾಜ್ ಮತ್ತು ಮಾಜಿ ಕಾರ್ಪೋರೇಟರ್ ಝಾಕೀರ್ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಡರಾತ್ರಿ ರಹಸ್ಯ ಸಭೆ ನಡೆಸಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಮೂವರೊಂದಿಗೆ ಖ್ಯಾತ ವಕೀಲರು ಸಹ ಈ ಸಭೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಸಂಪತ್ ರಾಜ್ ಮತ್ತು ಝಾಕೀರ್ ಆರೋಪಿಗಳಾಗಿದ್ದು, ಸದ್ಯ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಶಿಷ್ಯ ಸಂಪತ್ ರಾಜ್ ರಕ್ಷಣೆಗೆ ಮುಂದಾಗಿರುವ ಡಿ.ಕೆ.ಶಿವಕುಮಾರ್, ಕಾನೂನು ಮಾರ್ಗಗಳ ಬಗ್ಗೆ ವಕೀಲರ ಬಳಿ ಸಲಹೆ ಕೇಳಿದ್ದಾರೆ ಎನ್ನಲಾಗಿದೆ.ಸಭೆಗೆ ಸಂಪತ್ ರಾಜ್ ಕೆಲ ದಾಖಲೆಗಳೊಂದಿಗೆ ಆಗಮಿಸಿದ್ದರು. ದಾಖಲೆಗಳನ್ನ ನೋಡಿದ ಡಿ.ಕೆ.ಶಿವಕುಮಾರ್ ಮುಂದಿನದನ್ನ ನಾನು ನೋಡಿಕೊಳ್ಳುತ್ತೇನೆ ಎಂದು ಅಭಯ ಸಹ ನೀಡಿದ್ದಾರೆ ಎನ್ನಲಾಗಿದೆ.ಸುಮಾರು ಮೂವತ್ತು ನಿಮಿಷ ನಾಲ್ವರು ಮುಂದಿನ ನಿರ್ಧಾರಗಳ ಬಗ್ಗೆ ಚರ್ಚೆ ನಡೆಸಿದ್ದು, ಡಿಕೆ ಶಿವಕುಮಾರ್ ಆಪ್ತ ಶಿಷ್ಯನನ್ನು ರಕ್ಷಿಸಲು ಮುಂದಾಗಿರುವ ಮಾಹಿತಿ ಲಭ್ಯವಾಗಿದೆ.Sign in to your account
Username or Email Address


Password

 Remember Me


