ಹುಬ್ಬಳ್ಳಿ: ಮನೆಯಲ್ಲಿನ ಜಗಳಗಳಿಂದ ರೋಸಿ ಹೋದ ಪತಿ ಬೆಳಗ್ಗೆ ಪತ್ನಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಹುಬ್ಬಳ್ಳಿಯ ಸೆಟ್ಲಮೆಂಟ್ ಗಂಗಾಧರನಗರದಲ್ಲಿ ನಡೆದಿದೆ. ಸೆಟ್ಲಮೆಂಟ್ ನಿವಾಸಿ ಸುನಿಲ್ ತನ್ನ ಪತ್ನಿ ಸಂಗೀತಾಳಿಗೆ ಚಾಕುವಿನಿಂದ ಇರಿದಿದ್ದಾನೆ. ಈ ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಸುನಿಲ್ ಸ್ಥಳದಿಂದ ಪರಾರಿಯಾಗಿದ್ದಾನೆ. ಎರಡು ತಿಂಗಳ ಮಗುವನ್ನು ಸಂಗೀತಾ ಕಂಕುಳಲ್ಲಿ ಹಿಡಿದುಕೊಂಡು ಕುಳಿತಿದ್ದರು. ಆಗ ಪತಿ ಸುನಿಲ್ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಮಗು ಕೂಡಾ ಗಾಬರಿಯಾಗಿ ಅಳತೊಡಗಿದೆ ನೆರೆಹೊರೆಯವರು ಬಂದು ನೋಡಿದ್ದಾರೆ. ಸಂಗೀತಾ ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಕಿಮ್ಸ್‍ಗೆ ತರಲಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ.ಸಂಬಂಧಿಕರು ಮಗುವನ್ನು ಉಪಚರಿಸುತ್ತಿದ್ದಾರೆ. ಘಟನೆಯ ಬಗ್ಗೆ ಬೆಂಡಿಗೇರಿ ಠಾಣೆಯ ಪೊಲೀಸರು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.






 Advertisement 




Sign in to your account
Username or Email Address


Password

 Remember Me


