ಮಡಿಕೇರಿ: ಮೊಬೈಲ್ ಶಾಪ್‍ನಲ್ಲಿ ಹಾಡಹಗಲೇ ಮೂಬೈಲ್ ಖರೀದಿ ಮಾಡುವ ಸೋಗಿನಲ್ಲಿ ಬಂದ ಕಳ್ಳ ಸಾರ್ವಜನಿಕರ ಕೈಯಲ್ಲಿ ಸಿಕ್ಕಿಬಿದ್ದಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ಪಟ್ಟಣದಲ್ಲಿ ನಡೆದಿದೆ.ಪಿರಿಯಾಪಟ್ಟಣದ ಮೂಲದವನಾದ ರಾಜಿಕ್(30) ಮೊಬೈಲ್ ಖರೀದಿ ಮಾಡುವ ನೆಪದಲ್ಲಿ ಕೃಷ್ಣಾ ಮೊಬೈಲ್ ಅಂಗಡಿಗೆ ಬಂದಿದ್ದಾನೆ. ಮೊಬೈಲ್ ತೋರಿಸುವಂತೆ ಮಾಲೀಕರಿಗೆ ಹೇಳಿದ್ದಾನೆ. ಅಂಗಡಿಯವನು ಮೊಬೈಲ್ ಮಾದರಿ ಡಮ್ಮಿ ತೋರಿಸುತ್ತಿದ್ದ.ಇದರಿಂದ ಯೋವುದೇ ಪ್ರಯೋಜನ ಇಲ್ಲ ಎಂದು ಅರಿತ ರಾಜಿಕ್ ಅಸಲಿ ಮೂಬೈಲ್ ಅನ್ನು ಕೇಳಿದ್ದಾನೆ. ಅಂಗಡಿ ಮಾಲೀಕ ಫೋನ್ ಖರೀದಿ ಮಾಡಬಹುದು ಎಂದು ಬಾಕ್ಸ್ ಪೀಸ್ ತೆಗೆದುಕೊಂಡು ತೋರಿಸುತ್ತಿದಂತೆ ಮೊಬೈಲ್ ಕಸಿದುಕೊಂಡು ರಾಜೀಕ್ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.ತಕ್ಷಣವೇ ಅಂಗಡಿ ಮಾಲೀಕರು ಎಚ್ಚೆತ್ತುಕೊಂಡು ಆತನನ್ನು ಹಿಂಬಲಿಸಿ ಹಿಡಿದಿದ್ದಾರೆ. ರಾಜಿಕ್‍ನನ್ನು ಕುಶಾಲನಗರ ಪೊಲೀಸರಿಗೆ ಒಪ್ಪಿಸಲಾಗಿದೆ. ಅಂಗಡಿಯಲ್ಲಿ ಕಳ್ಳತನ ಮಾಡಿದ ದೃಶ್ಯ ಸಿಸಿ ಟಿವಿನಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ.






 Advertisement 




Sign in to your account
Username or Email Address


Password

 Remember Me


