ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಅವರಿಂದ ಸ್ಪೂರ್ತಿ ಪಡೆದ ಅಮೆರಿಕ ನಿವಾಸಿಯೊಬ್ಬರು ತಮ್ಮ ಕಾರು ನಂಬರ್ ಪ್ಲೇಟ್ ಮೇಲೆ ಕನ್ನಡ ಎಂದು ಬರೆದುಕೊಂಡಿದ್ದಾರೆ.ಅಭಿಮಾನಿಯೊಬ್ಬರು ಕಾರ್ ನಂಬರ್ ಪ್ಲೇಟ್ ಮೇಲೆ ಕನ್ನಡ ಎಂದು ಬರೆದುಕೊಂಡಿರುವ ಫೊಟೋವನ್ನು ಟ್ವೀಟ್ ಮಾಡಿ ಬುರ್ಜ್ ಖಲೀಫಾದಲ್ಲಿನ ಧ್ವಜದಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಬರೆದು ಕಿಚ್ಚ ಅವರಿಗೆ ಟ್ಯಾಗ್ ಮಾಡಿದ್ದಾರೆ. ಅಭಿಮಾನಿಯ ಕನ್ನಡಾಭಿಮಾನಕ್ಕೆ ಕಿಚ್ಚಾ ಧನ್ಯವಾದವನ್ನು ಹೇಳಿದ್ದಾರೆ.???????????????????????????????? https://t.co/E5hMtxnC4x— Kichcha Sudeepa (@KicchaSudeep) February 25, 2021ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ತಂಡ ಕಳೆದ ತಿಂಗಳು ಬುರ್ಜ್ ಖಲಿಫಾ ಮೇಲೆ ಮೊದಲು ಕನ್ನಡ ಬಾವುಟವನ್ನು ಪ್ರದರ್ಶನ ಮಾಡಿತ್ತು. ನ್ಯೂಯಾರ್ಕ್‍ನಲ್ಲಿ ನೆಲೆಸಿರುವ ಶಂಕರ್ ಸುದೀಪ್ ಅವರಿಂದ ಸ್ಪೂರ್ತಿ ಪಡೆದು ಕಾರ್ ನಂಬರ್ ಪ್ಲೇಟ್‍ಗೆ ಕನ್ನಡ ಎಂದು ಬರೆದುಕೊಂಡಿದ್ದಾರೆ. ನ್ಯೂಯಾರ್ಕ್‍ನಲ್ಲಿ ಕಾರ್ ನಂಬರ್ ಪ್ಲೇಟ್‍ಗೆ ಕನ್ನಡ ಎಂದು ಬರೆದು ಕನ್ನಡಾಭಿಮಾನ ತೋರಿರುವ ಕುರಿತಾಗಿ  ಟ್ವಿಟ್ಟರ್‌ನಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.






 Advertisement 




Sign in to your account
Username or Email Address


Password

 Remember Me


