ಬೆಂಗಳೂರು: ಸೊರಬ ಕ್ಷೇತ್ರದ ಶಾಸಕ ಮತ್ತು ಸ್ಯಾಂಡಲ್‍ವುಡ್ ನಟರು ಆಗಿರುವ ಕುಮಾರ್ ಬಂಗಾರಪ್ಪ ಅವರು ತಮ್ಮ ಮಗಳ ನಿಶ್ಚಿತಾರ್ಥದ ಸಂತೋಷದ ಕ್ಷಣಗಳ ಫೋಟೋವನ್ನು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಇತ್ತೀಚೆಗೆ ಕುಮಾರ್ ಬಂಗಾರಪ್ಪ ಅವರ ಪುತ್ರಿ ಲಾವಣ್ಯ ಹಾಗೂ ವಿಕ್ರಮಾದಿತ್ಯ ಉಂಗುರುವನ್ನು ಬದಲಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಶುಭ ಸಮಾರಂಭದಲ್ಲಿ ವಧು ಮತ್ತು ವರನ ಕುಟುಂಬಸ್ಥರು ಭಾಗಿಯಾಗಿದ್ದರು. ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿದೆ.ನನ್ನ ಮುದ್ದಿನ ಮಗಳ ನಿಶ್ಚಿತಾರ್ಥ ಕಾರ್ಯಕ್ರಮದ ಕೆಲವು ಫೋಟೊಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಹೇಗೆ ಇದೆಯೋ ಹಾಗೆಯೇ ಈ ನವ ಜೋಡಿಗಳ ಮೇಲೆ ನಿಮ್ಮೆಲ್ಲರ ಆಶೀರ್ವಾದ ಹಾಗೂ ಹಾರೈಕೆಗಳು ಸದಾ ಇರಲಿ ಎಂದು ಬರೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ನಿಶ್ಚಿತಾರ್ಥದ ಕೆಲವು ಫೋಟೋವನ್ನು ಹಂಚಿಕೊಂಡಿದ್ದಾರೆ. ನೆಟ್ಟಿಗರು ನವ ಜೋಡಿಗೆ ಶುಭಾಶಯವನ್ನು ಕೋರುತ್ತಿದ್ದಾರೆ.  A post shared by Kumar Bangarappa (@kumarbangarappa)ರಾಜಕೀಯ ಮತ್ತು ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕುಮಾರ್ ಬಂಗಾರಪ್ಪ ಅವರು ಮಗಳ ನಿಶ್ಚಿತಾರ್ಥವನ್ನು ಅದ್ಧೂರಿಯಾಗಿ ಮಾಡಿದ್ದಾರೆ. ತಮ್ಮ ಸಂತೋಷದ ಕ್ಷಣವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಮತ್ತು ಶುಭಾಶಯ ಮಹಾಪೂರವೇ ಹರಿದು ಬರುತ್ತಿದೆ.






 Advertisement 




Sign in to your account
Username or Email Address


Password

 Remember Me


