ಯಾದಗಿರಿ: ಮೊಮ್ಮಗಳ ಜೊತೆ ಮಗಳ ಮನೆಗೆ ತಾಯಿ ಹೊರಟಾಗ ಆಟೋ ಪಲ್ಟಿಯಾಗಿ ಸಾವನ್ನಪ್ಪಿರುವ ಘಟನೆ ಯಾದಗಿರಿ ತಾಲೂಕಿನ ಕ್ಯಾತಪ್ಪನಳ್ಳಿ ಗ್ರಾಮದ ಬಳಿ ನಡೆದಿದೆ.ಘಟನೆಯಲ್ಲಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕೊನ್ನೂರಿನ 55 ವರ್ಷದ ಶರಣಮ್ಮ ಸ್ಥಳದಲ್ಲೇ ಪ್ರಾಣಬಿಟ್ಟಿದ್ದು, ಮೊಮ್ಮಗಳು ಭಾಗ್ಯ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಶರಣಮ್ಮನ್ನ ಪ್ರಾಣ ತಮ್ಮ ಕಣ್ಣೆದರು ಹೋಗುತ್ತಿದ್ದರು ಜನ ಕಟುಕರಂತೆ ನೋಡುತ್ತಾ ನಿಂತಿದ್ದಾರೆ. ಭಾಗ್ಯ ಮತ್ತು ಶರಣಮ್ಮ ಬಿದ್ದು ಒದ್ದಾಡುತ್ತಿದ್ದರು ಜನ ಮಾತ್ರ ಸಹಾಯಕ್ಕೆ ತೆರಳಿಲ್ಲ.ಕೊನೆ ಉಸಿರು ಹೋಗುವ ತನಕ ಅವರಿಬ್ಬರನ್ನು ನೋಡುತ್ತಾ ಮೊಬೈಲ್ ನಲ್ಲಿ ವಿಡಿಯೋ ತೆಗೆಯುತ್ತಿದ್ದರು. ಜನರಲ್ಲಿ ಮಾನವೀಯತೆ ಸತ್ತುಹೋಗಿದೆ ಎನ್ನುವಂತಾಗಿದೆ. ಮೃತ ಶರಣಮ್ಮ ತನ್ನ ಮಗಳ ಮನೆ ಅಚ್ಚೋಲಗೆ ಮೊಮ್ಮಗಳು ಭಾಗ್ಯ ಜೊತೆ ಆಟೋದಲ್ಲಿ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಅವಘಡದಲ್ಲಿ ಶರಣಮ್ಮ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದು, ಬಾಲಕಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಯಾದಗಿರಿ ಗ್ರಾಮೀಣ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.ಪಿಎಸ್‍ಐ ಸುರೇಶ ಸ್ಥಳಕ್ಕೆ ತೆರಳಿ ಮಾಹಿತಿ ಪಡೆಯುತ್ತಿದ್ದಾರೆ.Sign in to your account
Username or Email Address


Password

 Remember Me


