ಬೆಂಗಳೂರು: ಅಂಬುಲೆನ್ಸ್‌ವೊಂದು (Ambulence) ಮೂರು ಕಾರು ಮತ್ತು ಒಂದು ಬೈಕ್‌ಗೆ ಸರಣಿಯಾಗಿ ಡಿಕ್ಕಿ (Accident) ಹೊಡೆದ ಪರಿಣಾಮ ಬೈಕ್ ಸವಾರ ಹಾಗೂ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಬ್ಯಾಟರಾಯನಪುರ (Byatarayanpura) ಸಂಚಾರಿ ಠಾಣಾ ವ್ಯಾಪ್ತಿಯ ಗುಡ್ಡದಹಳ್ಳಿ ಬಳಿ ನಡೆದಿದೆ.ಶುಕ್ರವಾರ ರಾತ್ರಿ 10:45ರ ಸುಮಾರಿಗೆ ಸರಣಿ ಅಪಘಾತ ನಡೆದಿದೆ. ಅಂಬುಲೆನ್ಸ್ ಚಾಲಕ ಸುಮಂತ್ ಮಾರ್ಕೆಟ್‌ನಿಂದ ಗುಡ್ಡದಹಳ್ಳಿ ಮಾರ್ಗವಾಗಿ ಬರುತ್ತಿದ್ದ ಸಂದರ್ಭ ನಿಯಂತ್ರಣ ಸಿಗದೆ ಎರಡು ಕಾರು ಹಾಗೂ ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿದೆ. ಈ ವೇಳೆ ಕಾರಲ್ಲಿದ್ದ ನಾಲ್ಕು ತಿಂಗಳ ಗರ್ಭಿಣಿ ಪಾರಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದನ್ನೂ ಓದಿ: ಗಾಳಿಯಲ್ಲಿ ಹಾರಿ ಮರಕ್ಕೆ ಅಪ್ಪಳಿಸಿದ ಕಾರು – ಅಮೆರಿಕದಲ್ಲಿ ಮೂವರು ಭಾರತದ ಮಹಿಳೆಯರು ಸಾವುಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬ್ಯಾಟರಾಯನಪುರ ಸಂಚಾರಿ ಪೊಲೀಸರು ಚಾಲಕ ಸುಮಂತ್‌ನನ್ನು ಬಂಧಿಸಿದ್ದಾರೆ. ಈ ಕುರಿತು ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಹೆಲಿಕಾಪ್ಟರ್‌ ಒಳಗೆ ಆಯತಪ್ಪಿ ಬಿದ್ದ ದೀದಿ- ಸಣ್ಣಪುಟ್ಟ ಗಾಯ


 Advertisement 







 Advertisement 




Sign in to your account
Username or Email Address


Password

 Remember Me


