ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ನೂತನವಾಗಿ ಅನುಷ್ಠಾನಕ್ಕೆ ತರುತ್ತಿರುವ ಪಾರ್ಸೆಲ್ ಮತ್ತು ಕಾರ್ಗೋ ಸೇವೆಯಾದ ‘ನಮ್ಮ ಕಾರ್ಗೋ’ ಸೇವೆ ಶುಕ್ರವಾರ ಉದ್ಘಾಟನೆಯಾಗಲಿದೆ.ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಇದೇ ಶುಕ್ರವಾರ ಈ ಸೇವೆಯನ್ನು ಉದ್ಧಾಟಿಸಲಿದ್ದಾರೆ.ರಾಜ್ಯಾದ್ಯಂತ ಹಾಗೂ ನೆರೆರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ವಿಶ್ವಾಸಾರ್ಹ ಮತ್ತು ಮಿತವ್ಯಯದ ನಮ್ಮ ಕಾರ್ಗೋ ಸೇವೆಯನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೋರಲಾಗಿದೆ.ಜೊತೆಗೆ ಕೆಎಸ್‌ಆರ್‌ಟಿಸಿ ಇಂತಹ ಒಂದು ಮಹತ್ವದ ಯೋಜನೆಗೆ ಕೈ ಹಾಕಿರುವುದು ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ.Sign in to your account
Username or Email Address


Password

 Remember Me


