ಬೆಳಗಾವಿ: ಕಿಡ್ನಾಪ್ ಆಗಿ ವೇಶ್ಯಾವಾಟಿಕೆಯಲ್ಲಿ ಸಿಲುಕಿಕೊಂಡಿದ್ದ, ಉತ್ತರ ಪ್ರದೇಶ ಯುವತಿಯನ್ನು ಬೆಳಗಾವಿಯ ಎಪಿಎಂಸಿ ಠಾಣೆಯ ಪೊಲೀಸರು ರಕ್ಷಣೆ ಮಾಡಿ ಮರಳಿ ಪಾಲಕರ ಮಡಿಲಿಗೆ ಸೇರಿಸಿದ್ದಾರೆ.ಫೆ.7ರಂದು ಬೆಳಗಾವಿಯ ಸದಾಶಿವನಗರದ ಮನೆಯೊಂದರರಲ್ಲಿ ನಡೆಯುತ್ತಿರುವ ಹೈಟೆಕ್ ವೇಶ್ಯಾವಾಟಿಕೆ ಜಾಲದ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿದ್ದರು. ಎಪಿಎಂಸಿ ಠಾಣೆ ಸಿಪಿಐ ಜಾವೇದ್ ಮುಷಾಪುರೆ ನೇತೃತ್ವದಲ್ಲಿ ವೇಶ್ಯಾವಾಟಿಕೆ ಮೇಲೆ ದಾಳಿ ನಡೆದಿದೆ. ಈ ವೇಳೆ ಇಬ್ಬರು ಯುವತಿಯರನ್ನು ಎಪಿಎಂಸಿ ಠಾಣೆ ಪೊಲೀಸರು ರಕ್ಷಣೆ ಮಾಡಿದ್ದಾರೆ.ವೇಶ್ಯಾವಾಟಿಕೆಯಲ್ಲಿ ಸಿಲುಕಿಕೊಂಡಿದ್ದ ಇಬ್ಬರು ಯುವತಿಯರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿತ್ತು. ವಿಚಾರಣೆ ವೇಳೆ ಓರ್ವ ಯುವತಿಯ ವಿಳಾಸವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. 2017ರಲ್ಲಿ ಈ ಯುವತಿ ಅಪಹರಣವಾಗಿದ್ದ ಬಗ್ಗೆ ಕೇಸ್ ದಾಖಲಾಗಿದ್ದ ಮಾಹಿತಿ ದೊರಕಿದೆ. ಉತ್ತರಪ್ರದೇಶದ ಗಾಜಿಯಾಬಾದ್ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲಾಗಿತ್ತು.ಯುವತಿ ತಂದೆ ಉತ್ತರಪ್ರದೇಶ ಪೊಲೀಸರೊಂದಿಗೆ ಬೆಳಗಾವಿಗೆ ಬಂದು ಅವರ ಮಗಳನ್ನು ಕರೆದುಕೊಂಡು ಹೋಗಿದ್ದಾರೆ. ಎಪಿಎಂಸಿ ಪೊಲೀಸರು, ಮಹಿಳಾ ಸಾಂತ್ವನ ಕೇಂದ್ರದ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗುತ್ತಿದೆ.






 Advertisement 




Sign in to your account
Username or Email Address


Password

 Remember Me


