ಕೋಲಾರ: ರಾತ್ರಿ ವೇಳೆ ಸಂಚರಿಸುತ್ತಿದ್ದ ಆನೆಗಳ ಹಿಂಡು ದಾಳಿ ಮಾಡಿದ ಪರಿಣಾಮ ರೈತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೋಲಾರದಲ್ಲಿ ನಡೆದಿದೆ.ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಭತ್ತಲಹಳ್ಳಿ ಬಳಿ ಕಳೆದ ರಾತ್ರಿ ಘಟನೆ ನಡೆದಿದ್ದು, 53 ವರ್ಷದ ರೈತ ವೆಂಕಟೇಶಪ್ಪ ಆನೆ ದಾಳಿಯಿಂದ ಜೀವ ಕಳೆದುಕೊಂಡವರಾಗಿದ್ದಾರೆ.ರಾತ್ರಿ ಊಟ ಮಾಡಿ ತೋಟದ ಬಳಿ ಕಾವಲಿಗೆಂದು ತೆರಳುತ್ತಿದ್ದ ವೇಳೆ ಆನೆ ಹಿಂಡು ದಾಳಿ ಮಾಡಿದ್ದರಿಂದ ವೆಂಕಟೇಶಪ್ಪ ಸಾವನ್ನಪ್ಪಿದ್ದಾರೆ. ಆನೆ ದಾಳಿ ಮಾಡಿದ ಪರಿಣಾಮ ತಲೆ ಸಂಪೂರ್ಣವಾಗಿ ನಜ್ಜಗುಜ್ಜಾಗಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಳೆದ 6 ತಿಂಗಳಲ್ಲಿ ಆನೆ ಹಿಂಡು ದಾಳಿಗೆ ಜಿಲ್ಲೆಯ ಮೂವರು ಬಲಿಯಾಗಿದ್ದಾರೆ. ಅನೆ ಹಿಂಡು ದಾಳಿಯಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದ್ದು, ಆನೆ ದಾಳಿಗೆ ಪರಿಹಾರ ಕಂಡುಕೊಳ್ಳದ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ ಹೊರಹಾಕಿದ್ದಾರೆ.






 Advertisement 




Sign in to your account
Username or Email Address


Password

 Remember Me


