ಬೆಂಗಳೂರು: ನಗರದ ಹೊರವಲಯ ಬೆಳ್ಳಂದೂರು ವಾರ್ಡ್‌ಗೆ ಬಿಬಿಎಂಪಿ ಕೋವಿಡ್ ಅಲರ್ಟ್ ನೀಡಿದೆ. ಬೆಳ್ಳಂದೂರಿನ ಅಂಬಲೀಪುರದ ಎಸ್.ಜೆ‌.ಆರ್ ವಾಟರ್ ಮಾರ್ಕ್ ಅಪಾರ್ಟ್‌ಮೆಂಟ್‌ನಲ್ಲಿ ಫೆಬ್ರವರಿ 15 ರಿಂದ 22 ರವರೆಗೆ ಹತ್ತು ಕೋವಿಡ್ ಪಾಸಿಟಿವ್ ಕಂಡುಬಂದಿದೆ.ಅಪಾರ್ಟ್‌ಮೆಂಟ್‌ನಲ್ಲಿರುವ ಒಂಭತ್ತು ಬ್ಲಾಕ್‌ಗಳಲ್ಲಿ 1,500 ಮಂದಿ ವಾಸ ಮಾಡುತ್ತಿದ್ದು, ಈ ಪೈಕಿ ಆರು ಬ್ಲಾಕ್‌ಗಳಲ್ಲಿ ಕೋವಿಡ್ ಪ್ರಕರಣ ಕಂಡುಬಂದಿದ್ದು ಆತಂಕಕ್ಕೆ ಎಡೆಮಾಡಿದೆ.ಈ ಆರು ಬ್ಲಾಕ್‌ಗಳನ್ನು ಕಂಟೈನ್ ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಪಾಲಿಕೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡಿದ್ದು, ಮಹದೇವಪುರ ವಲಯದ ಆರೋಗ್ಯಾಧಿಕಾರಿಗಳು ಒಂಭತ್ತು ಮೊಬೈಲ್ ತಂಡಗಳನ್ನು ನೇಮಿಸಿ, 500 ಜನರಿಗೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಲಾಗಿದೆ. ಮಂಗಳವಾರ ಇವರ ಕೋವಿಡ್ ರಿಪೋರ್ಟ್ ಸಿಗಲಿದೆ.ಸದ್ಯ ಅಪಾರ್ಟ್ ಮೆಂಟ್ ಸುತ್ತಮುತ್ತ ಸ್ಯಾನಿಟೈಸ್ ಮಾಡಲಾಗಿದ್ದು, ನಾಲ್ಕು ಜನ ವೈದ್ಯರನ್ನು ನೇಮಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.Sign in to your account
Username or Email Address


Password

 Remember Me


