ಉಡುಪಿ: ಈ ಬಿಜೆಪಿಯವರು ವಿಶ್ವಮಾನವರಲ್ಲ ಅಲ್ಪಮಾನವರು, ಮನುಷ್ಯ ದ್ವೇಷಿಗಳು, ಇಷ್ಟಕ್ಕೂ ಸ್ವಾತಂತ್ರ್ಯ ಹೋರಾಟಕ್ಕೆ ಆರ್‍ಎಸ್‍ಎಸ್ ಕೊಡುಗೆ ಏನು? ಬಿಜೆಪಿಯ ಒಬ್ಬನಾದ್ರೂ ಈ ದೇಶಕ್ಕೋಸ್ಕರ ಸತ್ತಿದ್ದಾನಾ? ಸ್ವಾತಂತ್ರ್ಯ ಹೋರಾಟ ಭಾಗವಹಿಸಿದ್ರಾ? ಎಂದು ಸಿದ್ದರಾಮಯ್ಯ ಪ್ರಶ್ನೆಗಳು ಸುರಿಮಳೆಗೈದಿದ್ದಾರೆ.ಉಡುಪಿಯಲ್ಲಿ ಜನಧ್ವನಿ ಜಾಥಾ ಉದ್ಘಾಟಿಸಿ ಸಿದ್ದರಾಮಯ್ಯ ಮಾತನಾಡಿದರು. ಗಾಂಧೀಜಿಯನ್ನು ಕೊಂದವರಿಂದ ದೇಶಭಕ್ತಿಯ ಪಾಠ ಬೇಕಾಗಿಲ್ಲ, ಈ ಮೋದಿ ಸ್ವಾತಂತ್ರ್ಯದ ನಂತ್ರ ಹುಟ್ಟಿದ ಗಿರಾಕಿ. ಕೇವಲ 56 ಇಂಚಿನ ಎದೆ ಇದ್ರೆ ಸಾಲಲ್ಲ, ಅದು ಬಾಡಿ ಬಿಲ್ಡರ್ ಗೂ ಇರುತ್ತೆ. ಎದೆಯೊಳಗೆ ಹೃದಯ ಇರೋದು ಮುಖ್ಯ ಎಂದು ವ್ಯಂಗ್ಯವಾಡಿದ್ದಾರೆ. ಕೇವಲ ಹಿಂದುತ್ವ ಅಂತದ್ರೆ ಹೊಟ್ಟೆ ತುಂಬಲ್ಲ, ಯಾಕೆ ನಾನು ಹಿಂದೂ ಅಲ್ವಾ? ನನ್ನ ಹೆಸರಲ್ಲೇ ರಾಮ ಇದ್ದಾನೆ. ನಾನು ಸಿದ್ದರಾಮಯ್ಯ, ನನ್ನದು ಮಹಾತ್ಮಾ ಗಾಂಧಿ ಹಿಂದುತ್ವ. ಈ ಬಿಜೆಪಿಯವರದ್ದು ಸಾವರ್ಕರ್ ಹಿಂದುತ್ವ ಎಂದು ಕಿಡಿಕಾರಿದ್ದಾರೆ.ನಾನು ಅಯೋಧ್ಯೆಯ ರಾಮಮಂದಿರಕ್ಕೆ ಹಣ ಕೊಡೋದಿಲ್ಲ ಮಾಜಿ ಸಿಎಂ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ನಾನು ನಮ್ಮೂರಲ್ಲೇ ರಾಮಮಂದಿರ ಕಟ್ಟಿಸ್ತೇನೆ, ಯಾಕೆ ನಮ್ಮೂರ ರಾಮ, ದಶರಥನ ಮಗ ಅಲ್ವಾ? ನಮ್ಮೂರ ರಾಮನಿಗೆ ಹಣ ಕೊಟ್ರೆ ಆಗಲ್ವಾ ಎಂದು ತನ್ನ ಟೀಕಾಕಾರನ್ನು ಪ್ರಶ್ನಿಸಿದ್ದಾರೆ. Sign in to your account
Username or Email Address


Password

 Remember Me


