ಹಾಸನ: ರಾಮಮಂದಿರಕ್ಕೆ ಹಣ ಕೇಳುವವರು ಗೂಂಡಾಗಳು ಎನ್ನುವವರು ಚುನಾವಣೆ ಬಂದಾಗ ಒಂದು ಟಿಕೆಟ್‍ಗೆ 4-5 ಕೋಟಿ ಇಸಿಕೊಳ್ಳುವವರಿಗೆ ಏನೆಂದು ಹೇಳಬೇಕು ಎಂದು ಮಾಜಿ ಸಚಿವ ಎ.ಮಂಜು, ಹೆಚ್ ಡಿ ಕುಮಾರಸ್ವಾಮಿಗೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.ಭಾರತ ಇರುವುದೇ ಸಂಪ್ರದಾಯ ಮತ್ತು ಸಂಸ್ಕೃತಿಯ ಮೇಲೆ. ರಾಮಮಂದಿರ ಕಟ್ಟುತ್ತಿರುವುದು ಒಂದು ಮಹತ್ತರ ಕಾರ್ಯ. ಇಂತಹ ಕಾರ್ಯಕ್ಕೆ ದೇಶದ ಜನರು ಹತ್ತು ರೂಪಾಯಿಂದ ತಮ್ಮ ಕೈಲಾದಷ್ಟು ಹಣ ಸಂದಾಯ ಮಾಡಿದ್ದಾರೆ. ಹಣ ಸಂಗ್ರಹಣೆ ಮಾಡುವವರನ್ನು ಪುಂಡ ಪೊಕರಿಗಳು ಎನ್ನುವುದಾದರೇ ಚುನಾವಣೆ ಸಂದರ್ಭದಲ್ಲಿ ಒಂದು ಟಿಕೆಟಿಗೆ ಕೋಟಿ ಕೋಟಿ ಇಸ್ಕೋತರಲ್ಲ ಅವರಿಗೆ ಏನು ಹೇಳಬೇಕು ಎಂದು ಹೇಳಿದ್ದಾರೆ.ನಾವು ದೇಶಕ್ಕಾಗಿ ಸಂಸ್ಕೃತಿ ಸಂಪ್ರದಾಯ ಮತ್ತು ದೇವರ ಕಾರ್ಯಕ್ಕಾಗಿ ಹಣ ಸಂಗ್ರಹಣೆ ಮಾಡಿದ್ದೇವೆ. ಅತೀ ಹೆಚ್ಚು ದೇಣಿಗೆ ಇಸ್ಕೊಂಡು ಬಿ-ಫಾರಂ ನೀಡುವ ಪಕ್ಷವಲ್ಲ ಎಂದು ಗೂಂಡಾ ಎಂದ ವಿಚಾರಕ್ಕೆ ಕಿಡಿಕಾರಿದ್ದಾರೆ.Sign in to your account
Username or Email Address


Password

 Remember Me


