ಕಲಬುರಗಿ: ಗಾಂಜಾ ಸಾಗಾಟ ಮಾಡ್ತಿದ್ದ ವ್ಯಕ್ತಿ ಮೇಲೆ ಕಲಬುರಗಿ ರೌಡಿ ನಿಗ್ರಹ ದಳದ ಪೊಲೀಸರು ಫೈರಿಂಗ್ ಮಾಡಿದ್ದು, ಸುಮಾರು 300 ಕೆ.ಜಿಗೂ ಹೆಚ್ಚು ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಕಲಬುರಗಿ ನಗರದ ಹೊರ ವಲಯದಲ್ಲಿರುವ ಸ್ವಾಮಿ ಸಮರ್ಥ ದೇವಾಲಯದ ಬಳಿ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಅಕ್ರಮವಾಗಿ ಗಾಂಜಾ ಸಾಗಾಟ ಮಾಡ್ತಿದ್ದಾರೆ ಅನ್ನೋ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲು ಮುಂದಾಗ ಆರೋಪಿ ಪೋಲಿಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗೆ ರೌಡಿ ನಿಗ್ರಹ ದಳದ ಪಿಎಸ್‍ಐ ವಾಹೀದ್ ಕೋತ್ವಾಲ್ ಅವರು ಫೈರಿಂಗ್ ಮಾಡಿದ್ದಾರೆ.ಆರೋಪಿ ಭೀಮು ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ನಿವಾಸಿ. ಇಬ್ಬರು ಹೆಣ್ಣುಮಕ್ಕಳು ಸೇರಿ ನಾಲ್ಕು ಜನ ಎರಡು ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದರು. ಸುಮಾರು 300 ಕೆಜಿಗೂ ಅಧಿಕ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಆರೋಪಿ ಭೀಮುವನ್ನು ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.Sign in to your account
Username or Email Address


Password

 Remember Me


