ಬೆಂಗಳೂರು: ಪಂಚಮಸಾಲಿ ಸಮಾವೇಶದಲ್ಲಿ ಮತ್ತೆ ಸಿಎಂ ಬಿಎಸ್‍ವೈ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.ಪದೇ ಪದೇ ಬಿಎಸ್‍ವೈ ಮೇಲೆ ಮಾತಿನ ಛಾಟಿ ಬೀಸುತ್ತಿರುವ ಯತ್ನಾಳ್ ವಿರುದ್ಧ ಗರಂ ಆಗಿರುವ ಬಿಎಸ್‍ವೈ ಟೀಂ ಇದೀಗ ಶಾಸಕರ ವಿರುದ್ಧ ಹೈಕಮಾಂಡ್‍ಗೆ ದೂರು ಕೊಡಲು ಮುಂದಾಗಿದೆ.ಮುಖ್ಯಮಂತ್ರಿಯವರೇ ನಿಮ್ಮ ನಾಟಕ ಕಂಪನಿ ಬಂದ್ ಮಾಡಿ. ನೋಟಿಸ್ ಕೊಟ್ಟು ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಮೀಸಲಾತಿ ನೀಡದಿದ್ದಲ್ಲಿ ಕುರ್ಚಿ ಖಾಲಿ ಮಾಡಿಸುತ್ತೇವೆ. ನಿನ್ನೆ ಸಮಾವೇಶದಲ್ಲಿ ಪ್ರಚೋದನೆ ಮಾಡಿದ್ದೇ ಯತ್ನಾಳ್. ಹೀಗಾಗಿ ಯತ್ನಾಳ್‍ಗೆ ಬುದ್ಧಿ ಕಲಿಸಲೇಬೇಕೆಂದು ಬಿಎಸ್‍ವೈ ಟೀಂ ಪಣ ತೊಟ್ಟಿದೆ.ಶತಾಯಗತಾಯ ಯತ್ನಾಳ್ ಉಚ್ಛಾಟನೆಗೆ ಬಿಎಸ್‍ವೈ ಟೀಂ ಪಟ್ಟು ಹಿಡಿದಿದ್ದು, ಶೀಘ್ರದಲ್ಲೇ ದೆಹಲಿಗೆ ತೆರಳಲು ಬಿಎಸ್‍ವೈ ಆಪ್ತರ ಒಂದು ಟೀಮ್ ಸಿದ್ಧತೆ ಮಾಡಿಕೊಂಡಿದೆ. ಯತ್ನಾಳ್ ವಿರುದ್ಧ ಚಾರ್ಜ್ ಶೀಟನ್ನೂ ರೆಡಿ ಮಾಡುತ್ತಿರುವ ಬಿಎಸ್‍ವೈ ಟೀಂ, ಇದುವರೆಗೆ ಯತ್ನಾಳ್ ಕೊಟ್ಟ ಹೇಳಿಕೆಗಳ ಬಗ್ಗೆ ವಿವರಿಸಲು ನಿರ್ಧಾರ ಮಾಡಿದೆ.






 Advertisement 




Sign in to your account
Username or Email Address


Password

 Remember Me


