ಬೆಂಗಳೂರು: ಇಂದು ಕರ್ನಾಟಕದಲ್ಲಿ 386 ಮಂದಿಗೆ ಕೊರೊನಾ ಬಂದಿದ್ದು, ಆಸ್ಪತ್ರೆಯಿಂದ 291 ಜನ ಡಿಸ್ಚಾರ್ಜ್ ಆಗಿದ್ದಾರೆ. 5 ಜನ ಕೊರೊನಾಗೆ ಬಲಿಯಾಗಿದ್ದಾರೆ.ಇಂದು ರಾಜ್ಯದಲ್ಲಿ ಒಟ್ಟು 1,03,739 ಮಂದಿಗೆ ಲಸಿಕೆ ನೀಡಲು ಯೋಜನೆ ಹಾಕಿಕೊಳ್ಳಲಾಗಿತ್ತು. ಈ ಪೈಕಿ 40,575 (ಶೇ.39)ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ.ಇಂದು ಬೀದರ್, ಕೊಪ್ಪಳ, ರಾಮನಗರ ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,47,246 ಕ್ಕೆ ಏರಿಕೆ ಆಗಿದೆ. ಈ ಪೈಕಿ 9,29,058 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 5,882 ಸಕ್ರಿಯ ಪ್ರಕರಣಗಳಿವೆ.ಒಟ್ಟು ಇಲ್ಲಿಯವರೆಗೆ 12,287 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 125 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 3,973 ಆಂಟಿಜನ್ ಟೆಸ್ಟ್, 57,467 ಆರ್ ಟಿ ಪಿಸಿಆರ್ ಸೇರಿದಂತೆ ಒಟ್ಟು 61,440 ಮಂದಿಗೆ ಪರೀಕ್ಷೆ ಮಾಡಲಾಗಿದೆ.ಇಂದು ಬೆಂಗಳೂರಿನಲ್ಲಿ 209 ಕೇಸ್ ವರದಿಯಾಗಿದೆ. ಮೈಸೂರು 34, ಕಲಬುರುಗಿ 23, ದಕ್ಷಿಣ ಕನ್ನಡ 20, ಬೆಳಗಾವಿ 10, ತುಮಕೂರಿನ 11 ಮಂದಿಗೆ ಸೋಂಕು ಬಂದಿದೆ. ಒಟ್ಟು 125 ಮಂದಿ ಐಸಿಯುನಲ್ಲಿದ್ದು, ಬೆಂಗಳೂರಿನಲ್ಲಿ 63, ಕಲಬುರಗಿ 9, ತುಮಕೂರು 8, ಹಾಸನ 5, ಉಡುಪಿ 4, ಮತ್ತು ದಕ್ಷಿಣ ಕನ್ನಡದ 3 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.






 Advertisement 




Sign in to your account
Username or Email Address


Password

 Remember Me


