ದಾವಣಗೆರೆ: ಕುಡಿಯಲು ಹಣ ಕೊಡಲಿವೆಂದು ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ತಾನೂ ಚಾಕುವಿನಿಂದ ಚುಚ್ಚಿಕೊಂಡಿರುವ ಘಟನೆ ದಾವಣಗೆರೆಯ ಅಮರಾವತಿಯಲ್ಲಿ ನಡೆದಿದೆ.

ಸೌಭಾಗ್ಯಮ್ಮ (50) ಕೊಲೆಯಾದ ಮಹಿಳೆ. ಕುಡಿಯಲು ಹಣ ನೀಡಲ್ಲವೆಂದು ಪತಿ ಪರಶುರಾಮ(54) ಕೊಲೆ ಮಾಡಿ ತಾನು ಚಾಕುವಿನಿಂದ ಇರಿದುಕೊಂಡು ಆಸ್ಪತ್ರೆ ಸೇರಿದ್ದಾನೆ.ದಂಪತಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಅಮರಾವತಿ ಗ್ರಾಮದ ನಿವಾಸಿಗಳಾಗಿದ್ದಾರೆ. ಕುಡಿಯಲು ಪತ್ನಿ ಹಣ ನೀಡುತ್ತಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪತಿರಾಯ ಚಾಕುನಿಂದ ಪತ್ನಿಗೆ ಇರಿದಿದ್ದಾನೆ. ಕೊನೆಗೆ ತಾನೂ ಚಾಕುವಿನಿಂದ ಚುಚ್ಚಿಕೊಂಡಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕುಡಿಯಲು ದುಡ್ಡು ಕೇಳಿದಾಗ ಕೊಡದ ಪತ್ನಿಯ ಮೇಲೆ ಸಿಟ್ಟು ಬಂದು ಚಾಕುವಿನಿಂದ ದಾಳಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ.


 Advertisement 




 Advertisement 






 Advertisement 




Sign in to your account
Username or Email Address


Password

 Remember Me


