ಬಾಗಲಕೋಟೆ: ಸೈಟ್ ಗಾಗಿ ಮುಂಗಡ ಕೊಟ್ಟ ಹಣ ವಾಪಸ್ ಕೊಡದ ಹಿನ್ನೆಲೆ ಹೈಸ್ಕೂಲ್ ಶಿಕ್ಷಕರೊಬ್ಬರು, ನೇಣು ಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಮೂಗನೂರಲ್ಲಿ ನಡೆದಿದೆ.ಹನುಮಂತ ಪೂಜಾರ(42) ಮನೆಯಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ. ಕಮತಗಿ ಪಟ್ಟಣದದ ಹೊಳೆಹುಚ್ಚೇಶ್ವರ ಹೈಸ್ಕೂಲ್‍ನಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ನನ್ನ ಸಾವಿಗೆ ತಿಮ್ಮಣ್ಣ ಬಸಪ್ಪ ಹಗೆದಾಳ ಕಮತಗಿ ಕಾರಣ. ಈತ ನನಗೆ ಮೂರು ಲಕ್ಷ ಹಣ ಕೊಡಬೇಕು. ಮರಳಿ ಕೊಟ್ಟಿರೋದಿಲ್ಲ, ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಬರೆದು ವಂಚನೆ ಮಾಡಿರುವ ವ್ಯಕ್ತಿಯ ಫೋನ್ ನಂಬರ್ ಅನ್ನು ಡೆತ್ ನೋಟ್‍ನಲ್ಲಿ ಬರೆದಿದ್ದಾರೆ.ಕಮತಗಿ ಪಟ್ಟಣದಲ್ಲಿ ಸೈಟ್ ಖರೀದಿಮಾಡಲು ಹನುಮಂತ ಮುಂದಾಗಿದ್ದರು. ತಿಮಣ್ಣ ಅವರಿಗೆ ಸೇರಿದ ಸೈಟ್ ಇದಾಗಿದ್ದು, 12 ಲಕ್ಷಕ್ಕೆ ಮಾತುಕತೆ ಮಾಡಲಾಗಿತ್ತು. ಮುಂಗಡವಾಗಿ ತಿಮ್ಮಣ್ಣ ಹಗೆದಾಳಗೆ ಮೂರು ಲಕ್ಷ ಹಣವನ್ನು ಹನುಮಂತ ನೀಡಿದ್ದರು. ತಿಮ್ಮಣ್ಣ ಹಣ ವಾಪಸ್ ಕೇಳಿದರೆ ಕೊಟ್ಟಿರಲಿಲ್ಲ. ಇದರಿಂದ ಮನನೊಂದ ಹನುಮಂತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಅಮೀನಗಢ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.






 Advertisement 




Sign in to your account
Username or Email Address


Password

 Remember Me


