ಹಾಸನ: ಪತ್ನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಬಳಿಕ ಪತಿ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಹಾಸನ ತಾಲೂಕಿನ ಶಾಂತಿಗ್ರಾಮದಲ್ಲಿ ನಡೆದಿದೆ.ಮೃತ ದುರ್ದೈವಿ ಪತ್ನಿಯನ್ನು ಅನ್ನಪೂರ್ಣ(23) ಎಂದು ಗುರುತಿಸಲಾಗಿದೆ. ಈಕೆಯನ್ನು ಪತಿ ತುಳಸಿದಾಸ್ (40) ಕೊಲೆ ಮಾಡಿದ್ದಾನೆ. ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ತುಳಸಿದಾಸ್ ಮೂರು ತಿಂಗಳ ಹಿಂದೆ ಮೈಸೂರು ಮೂಲದ ಅನ್ನಪೂರ್ಣಳನ್ನ ಮದುವೆಯಾಗಿದ್ದ. ಎಟಿಎಂನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ತುಳಸಿದಾಸ್, ಇಂದು ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದ. ಈತ ಇಂದು ಜಮೀನು ಬಳಿ ಪತ್ನಿ ಅನ್ನಪೂರ್ಣಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.ಶಾಂತಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.Sign in to your account
Username or Email Address


Password

 Remember Me


