ಬೆಂಗಳೂರು: ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಪೊಗರು ಇಂದು ರಿಲೀಸ್‌ ಆಗಿದೆ. ಏಕಕಾಲದಲ್ಲಿ ಕನ್ನಡ, ತಮಿಳು, ತೆಲುಗಿನಲ್ಲಿ ರಿಲೀಸ್ ಆಗಿದ್ದು ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಪೊಗರು ಸಿನಿಮಾ ಬೆಂಗಳೂರಿನಲ್ಲಿ ಬೆಳ್ಳಗ್ಗೆಯೇ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಬರೋಬ್ಬರಿ ಮೂರು ವರ್ಷಗಳ ನಂತರ ಸಿಲ್ವರ್ ಸ್ಕ್ರೀನ್ ಮೇಲೆ ಧ್ರುವ ಕಾಣಿಸಿಕೊಳ್ಳುತ್ತಿದ್ದಾರೆ.ಒಟ್ಟು 1 ಸಾವಿರಕ್ಕೂ ಹೆಚ್ಚು ಚಿತ್ರ ಮಂದಿರದಲ್ಲಿ ತೆರೆ ಕಾಣಲಿರುವ ಪೊಗರು ಈಗಾಗಲೇ ಬೆಂಗಳೂರಿನ 33 ಚಿತ್ರಮಂದಿರಗಳಲ್ಲಿ ಬೆಳಗ್ಗೆ 6:45ಕ್ಕೆ ಶೋ ಆರಂಭವಾಗಿದೆ. ಸಿದ್ದೇಶ್ವರ, ಶ್ರೀನಿವಾಸ, ಲಕ್ಷ್ಮಿ, ಪ್ರಸನ್ನ ಥಿಯೇಟರ್ ನಲ್ಲಿ ಮುಂಜಾನೆ ಶೋ ಆರಂಭವಾಗಿದೆ. ಮೊದಲ ಶೋಗೆ ಥಿಯೇಟರ್‌ಗೆ ಬಂದ ಅಭಿಮಾನಿಗಳು ಧ್ರುವ ಸರ್ಜಾ ಕಟೌಟ್‍ಗೆ ಹೂ, ಹಾಲಿನ ಅಭಿಷೇಕ ಮಾಡಿದ್ದಾರೆ.ಆ್ಯಕ್ಷನ್ ಜೊತೆಗೆ ಫ್ಯಾಮಿಲಿ‌ ಸೆಂಟಿಮೆಂಟ್ ಕಥೆಯನ್ನು ಹೊಂದಿರುವ ಪೊಗರು ಸಿನಿಮಾ 300 ಚಿತ್ರಮಂದಿರಗಳಲ್ಲಿ ಬೆಳಗ್ಗೆ ಶೋ ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ಧ್ರುವ ಸರ್ಜಾ ಜೊತೆ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ನಂದಕಿಶೋರ್ ನಿರ್ದೇಶನದ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್, ತಾರಾ ಅನುರಾಧ, ರವಿಶಂಕರ್, ಪವಿತ್ರ ಲೋಕೇಶ್, ಡಾಲಿ ಧನಂಜಯ, ಚಿಕ್ಕಣ್ಣ, ದಿವಂಗತ ಬುಲೆಟ್ ಪ್ರಕಾಶ್ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ.Sign in to your account
Username or Email Address


Password

 Remember Me


