ವಿಜಯಪುರ: ಆಕಸ್ಮಿಕವಾಗಿ ಕಾರಿಗೆ ಬೆಂಕಿ ಹತ್ತಿ ಹೊತ್ತಿ ಉರಿದ ಘಟನೆ ವಿಜಯಪುರದ ತಿಡಗುಂದಿ ಗ್ರಾಮದ ಬಳಿ ನಡೆದಿದೆ. ತಡರಾತ್ರಿ ಈ ಅವಘಡ ನಡೆದಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಅನಾಹುತದಿಂದ ಪಾರಾಗಿದ್ದಾರೆ.ವಿಜಯಪುರದಿಂದ ಸೊಲ್ಲಾಪುರ ಹೋಗುವ ವೇಳೆ ತಿಡಗುಂದಿ ಬಳಿ ಬೆಂಕಿ ಅವಘಡ ಸಂಭವಿಸಿದ್ದು, ಈ ಕಾರು ಆಲಮೇಲ ಪಟ್ಟಣ ಪಂಚಾಯತಿ ಸದಸ್ಯ ಸಾಧೀಕ್ ಎಂಬವರಿಗೆ ಸೇರಿದ್ದಾಗಿದೆ.ಕಾರಿನಲ್ಲಿದ್ದ 85 ಸಾವಿರ ನಗದು ಹಾಗೂ ಬೆಲೆಬಾಳುವ ವಸ್ತುಗಳು ಸುಟ್ಟು ಭಸ್ಮವಾಗಿದೆ. ಮಹೀಂದ್ರಾ ಕಂಪನಿಯ ಎಕ್ಸ್‌ಯುವಿ500 ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


